ಬಿಜೆಪಿ ಅಭ್ಯರ್ಥಿಯ ಕಾಲು ತೊಳೆದು, ನಮಸ್ಕರಿಸಿದ ಮತದಾರರು | ಕೇರಳಕ್ಕೂ ವಕ್ಕರಿಸಿತೇ ಗುಲಾಮಿ ಸಂಸ್ಕೃತಿ?

e shreedharan
19/03/2021

ಪಾಲಕ್ಕಾಡ್: ಕೇರಳದಲ್ಲಿ ಬಿಜೆಪಿ ತನ್ನ ಗುಲಾಮಿ ಸಂಸ್ಕೃತಿಯನ್ನು ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿ ಇ ಶ್ರೀಧರನ್ ಪಾದ ತೊಳೆದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಬಳಿಕ ಅವರಿಗೆ  ನಮಸ್ಕರಿಸುತ್ತಿರುವ ಚಿತ್ರವೊಂದು ವ್ಯಾಪಕ ವೈರಲ್ ಆಗಿದೆ.

ಇ.ಶ್ರೀಧರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿನ ಮತದಾರರು ಹಾಗೂ ಕಾರ್ಯಕರ್ತರು ಬಿಜೆಪಿಯ ಸಂಸ್ಕೃತಿಯ ಪ್ರಕಾರ ಇ ಶ್ರೀಧರನ್ ಅವರ ಕಾಲು ತೊಳೆದು, ಕಾಲಿಗೆ ನಮಸ್ಕರಿಸುತ್ತಿರುವ ಗುಲಾಮಗಿರಿಯ ಸಂಸ್ಕೃತಿಯನ್ನು ಪ್ರದರ್ಶಿಸಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ.

ಬಿಜೆಪಿಯು ಈ ಕೃತ್ಯದ ಮೂಲಕ ಜಾತಿವಾದದ ಸಂಸ್ಕೃತಿಯನ್ನು ಕೇರಳದಲ್ಲಿ ಹೇರಲು ಮುಂದಾಗುತ್ತಿದೆ.  ಮೇಲ್ಜಾತಿ ಹಾಗೂ ಶ್ರೀಮಂತರ ಪಾದ ತೊಳೆಯುವ ಮತ್ತು  ನಮಸ್ಕರಿಸುವ ಅನಿಷ್ಠ ಸಂಸ್ಕೃತಿಯನ್ನು ಹೇರಲು ಬಿಜೆಪಿ ಈಗಿನಿಂದಲೇ ಸಿದ್ಧತೆ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ

Exit mobile version