ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ! - Mahanayaka
11:27 PM Wednesday 5 - February 2025

ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!

nanjangudu temple
11/09/2021

ಮೈಸೂರು:  ಬಿಜೆಪಿ ಆಡಳಿತದಲ್ಲಿಯೇ ನಂಜನಗೂಡಿನ ಹುಚ್ಚಗಣಿ ದೇಗುಲವನ್ನು ನೆಲ ಸಮ ಮಾಡಲಾಗಿದ್ದು, ಇದನ್ನೇ ಬೇರೆ ಯಾವುದಾದರೂ ಪಕ್ಷ ಆಡಳಿತದಲ್ಲಿರುವಾಗ ನಡೆಸಿದ್ದರೆ, ಈ ವೇಳೆಗೆ ಹಿಂದೂ ವಿರೋಧಿ, ಜಿಹಾದಿ ಸರ್ಕಾರ್ ಮೊದಲಾದ ಹೆಸರುಗಳು ಬರುತ್ತಿದ್ದವೋ ಏನೋ ಎನ್ನುವ ಅಭಿಪ್ರಾಯಗಳು ಇದೀಗ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿದೆ.

ಈ ದೇವಸ್ಥಾನವನ್ನು ನೆಲಸಮ ಮಾಡಲು ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಈವರೆಗೆ ದೇವಸ್ಥಾನವನ್ನು ಮುಟ್ಟುವ ಧೈರ್ಯ ಯಾರೂ ಮಾಡಿರಲಿಲ್ಲ. ಬಿಜೆಪಿ ಆಡಳಿತ ಇರುವ ಕಾರಣ ದೇವಸ್ಥಾನ ಸೇಫ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ನಡೆದದ್ದೇ ಬೇರೆ, ಬಿಜೆಪಿ ಆಡಳಿತದಲ್ಲಿಯೇ ಹಿಂದೂ ದೇವಸ್ಥಾನ ನೆಲಕಚ್ಚಿದೆ. ಸ್ವತಃ ಹಿಂದುತ್ವದ ಹೆಸರಿನಲ್ಲಿಯೇ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದೀಗ ಹಿಂದೂ ದೇವಸ್ಥಾನವನ್ನೇ ಉರುಳಿಸಿದೆ. ಇದೇ ಕೆಲಸವನ್ನು ಬೇರೆ ಯಾವುದಾದರೂ ಸರ್ಕಾರ ನಡೆಸಿದ್ದರೆ, ಹಿಂದೂ ವಿರೋಧಿ, ಜಿಹಾದಿ ಎಂಬೆಲ್ಲ ವಿಚಾರಗಳಲ್ಲಿ ಘರ್ಷಣೆಗಳೇ ನಡೆದು ಹೋಗುತ್ತಿದ್ದವು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಕೋರ್ಟ್ ಆದೇಶ ಪಾಲಿಸುವುದು ಅಧಿಕಾರಿಗಳ ಕರ್ತವ್ಯ ಅದನ್ನು ಅವರು ಮಾಡಿದ್ದಾರೆ. ಮುಂಜಾನೆ ಸ್ಥಳಕ್ಕೆ ಆಗಮಿಸಿದ ಜೆಸಿಬಿ ದೇವಸ್ಥಾನವನ್ನು ಕೆಡವಿ ಹಾಕಿದೆ. ಈ ಮೂಲಕ ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನವನ್ನು ಉರುಳಿಸಿದ ಇತಿಹಾಸವೊಂದು ನಿರ್ಮಾಣವಾಗಿದೆ.

ಇನ್ನಷ್ಟು ಸುದ್ದಿಗಳು…

ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಪ್ರಿಯಾಂಕ ಟಿಬ್ರೆವಾಲ್ ಹಿನ್ನೆಲೆ ಏನು ಗೊತ್ತೆ?

ಸ್ಕೂಟಿಯಲ್ಲಿ ಪ್ರಯಾಣಿಸುತ್ತಿರುವ ವೇಳೆಯೇ ಪತ್ನಿಯನ್ನು ಇರಿದು ಕೊಂದ ಪತಿ!

ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು

ಯುವತಿಯನ್ನು ಅತ್ಯಾಚಾರ ಎಸಗಿ ಪರಾರಿಯಾದ ಗ್ರಾಮ ಲೆಕ್ಕಾಧಿಕಾರಿ!

ಮತಾಂತರದ ಸುಳ್ಳು ಆರೋಪ ಹೊರಿಸಿ, ಗುಂಪಿನಿಂದ ದಾಂಧಲೆ: ಕ್ರಮಕ್ಕೆ ಆಗ್ರಹ

ಹುಡುಗಿಯರಿಗೆ ಉಚಿತ ಬ್ಯೂಟಿ ಪಾರ್ಲರ್, ಹಿರಿಯರಿಗೆ ತಂಬಾಕು, ಬೀಡಿ ಫ್ರೀ: ಗ್ರಾಪಂ ಅಭ್ಯರ್ಥಿಯ ಪ್ರಣಾಳಿಕೆ!

ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿ: 6 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ

ಇತ್ತೀಚಿನ ಸುದ್ದಿ