ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ಜೆ.ಪಿಗೆ ಗೆಲುವು

ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ –2023 ಕ್ಕೆ ಸಂಬಂಧಿಸಿದಂತೆ ಇಂದು ನಡೆದ ಮತ ಎಣಿಕೆಯಲ್ಲಿ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ಜೆ.ಪಿ ಪಕ್ಷವು ಗೆಲುವು ಸಾಧಿಸಿದೆ.
118-ಬೈಂದೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 16,153 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ.ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದಿರುತ್ತಾರೆ.ಉಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್ 626, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ 613,ಬಿ. ಶ್ಯಾಮ 296ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ.1,208 ನೋಟಾ ಮತದಾನವಾಗಿರುತ್ತದೆ.
119-ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು, 1,02,424ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ41,556ಮತಗಳ ಅಂತರದಿಂದ ಜಯಗಳಿಸಿರುತ್ತಾರೆ.ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿರುತ್ತಾರೆ.ಇನ್ನುಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ರಮೇಶ್ 1,053, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1,257 ಹಾಗೂ ಪಕ್ಷೇತರ ಅಭ್ಯರ್ಥಿ ಜಿ. ಚಂದ್ರಶೇಖರ್ 728 ಮತಗಳನ್ನು ಪಡೆದಿರುತ್ತಾರೆ.ಒಟ್ಟು 1,141 ನೋಟಾ ಮತಗಳು ಚಲಾವಣೆಯಾಗಿರುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw