ಬೈಕ್ ಗಳ ನಡುವೆ ಅಪಘಾತ: ಬಿಜೆಪಿ ಮುಖಂಡನ ಅಂಗರಕ್ಷಕನಿಗೆ ಗಾಯ

accident
17/10/2022

ಉಡುಪಿ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಅಂಗರಕ್ಷಕ ಗಾಯಗೊಂಡ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ನಡೆದಿದೆ.

ಯಶ್ ಪಾಲ್ ಸುವರ್ಣ ಅಂಗರಕ್ಷಕ, ಕೊಡವೂರು ನಿವಾಸಿ ಗಣೇಶ್ ಅವರು ಬೈಕ್ ನಲ್ಲಿ ಅಜ್ಜರಕಾಡುನಲ್ಲಿರುವ ಯಶಪಾಲ್ ಸುವರ್ಣ ಅವರ ಮನೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕರಾವಳಿ ಕಡೆಗೆ ಸ್ಕೂಟರ್ ಸವಾರ ರಾಹಿಲ್ ಅನ್ವರ್ ಎಂಬಾತ ತನ್ನ ಬೈಕ್ ಅನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಣೇಶ್‌ ಅವರ ಬೈಕ್ ಗೆ ಡಿಕ್ಕಿ‌ಹೊಡೆದಿದ್ಧಾನೆ.‌

ಇದರಿಂದ ಗಾಯಗೊಂಡ ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version