ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ: ಬಿಜೆಪಿ ಕೌನ್ಸಿಲರ್ ಗೆ ಸಂಕಷ್ಟ
ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ದೆಹಲಿಯ ಬಿಜೆಪಿ ಕೌನ್ಸಿಲರ್ ರವೀಂದ್ರ ಸಿಂಗ್ ನೇಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಟಿಝನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಅಥವಾ ಸಿಜೆ ಪಿ ಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜನವರಿ 6ರಂದು ದೆಹಲಿಯ ಪ್ರತಾಪ್ ಘರ್ ನ ಚುನಾವಣಾ ಸಭೆಯಲ್ಲಿ ಅವರು ಮುಸ್ಲಿಂ ವಿರೋಧಿ ಭಾಷಣ ಮಾಡಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.
ಮುಸ್ಲಿಮರನ್ನು ಮೊಘಲರ ವಂಶಜರು ಎಂದು ಟೀಕಿಸಿದ ನೇಗಿ, ಈ ದೇಶಕ್ಕೆ ಮುಸ್ಲಿಮರ ಜನಸಂಖ್ಯೆಯಿಂದ ಬೆದರಿಕೆ ಇದೆ ಎಂದು ಹೇಳಿರುವುದಾಗಿ ಸಿಜೆಪಿ ತನ್ನ ದೂರಿದಲ್ಲಿ ತಿಳಿಸಿದೆ.
ಮುಸ್ಲಿಮರ ಬೆದರಿಕೆಯಿಂದ ಹಿಂದುಗಳನ್ನ ರಕ್ಷಿಸಬೇಕಿದೆ ಎಂದು ಅವರು ಹೇಳಿರುವುದನ್ನು ಸಿಜೆಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ಮುಸ್ಲಿಮರನ್ನು ಮೊಘಲರ ವಂಶದವರೆಂದು ಹೇಳುವ ಮೂಲಕ ಮತ್ತು ಹಿಂದುಗಳು ಮುಸ್ಲಿಮರಿಂದಾಗಿ ಅಪಾಯದಲ್ಲಿದ್ದಾರೆ ಎಂದು ವ್ಯಾಖ್ಯಾನಿಸುವ ಮೂಲಕ ಚುನಾವಣೆಯನ್ನು ಹಿಂದೂ ಮುಸ್ಲಿಂ ಎಂದು ವಿಭಜಿಸುವುದಕ್ಕೆ ನೇಗಿ ಯತ್ನಿಸಿದ್ದಾರೆ, ಹಾಗೆಯೇ ಬಾಂಗ್ಲಾದೇಶದ ಹಿಂದುಗಳ ಬಗ್ಗೆ ಮತ್ತು ಕಾಶ್ಮೀರದ ಪಂಡಿತರ ವಲಸೆಯ ಬಗ್ಗೆ ಅವರು ಉಲ್ಲೇಖಿಸಿ ಇದಕ್ಕೆ ಮುಸ್ಲಿಮರು ಕಾರಣ ಎಂಬಂತೆ ಪರೋಕ್ಷವಾಗಿ ಬಿಂಬಿಸಿದ್ದಾರೆ.
ಆದರೆ ಇವೆರಡು ಪ್ರಕರಣಗಳಿಗೂ ಮುಸ್ಲಿಮರಿಗೂ ಸಂಬಂಧ ಇಲ್ಲ. ಅದು ಸರಕಾರಿ ಮಟ್ಟದಲ್ಲಿ ನಡೆದಿರುವ ಘಟನೆಗಳು. ಆದರೆ ಮುಸ್ಲಿಮರನ್ನು ಇಂತಹ ಪ್ರಕರಣಗಳಿಗೆ ಹೊಣೆಗಾರರಂತೆ ಬಿಂಬಿಸಿ ಚುನಾವಣೆಯನ್ನು ಧರ್ಮಧಾತವಾಗಿ ಮಾಡಲು ಅವರು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj