ಬಿಜೆಪಿಗೆ ಮಣ್ಣುಮುಕ್ಕಿಸಿದ ದೀದಿ | ಮೂರನೇ ಬಾರಿಗೆ ಪಶ್ಚಿಮಬಂಗಾಳಕ್ಕೆ ದೀದಿಯೇ ಸಿಎಂ
ಪಶ್ಚಿಮಬಂಗಾಳ: ನಂದಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ವಿರುದ್ಧದ ರೋಚಕ ಹಣಾಹಣಿಯ ಬಳಿಕ ಮಮತಾ ಬ್ಯಾನರ್ಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ಚಾಲೆಂಜ್ ಸ್ವೀಕರಿಸಿ, ತಮ್ಮ ಸ್ವಕ್ಷೇತ್ರವನ್ನು ತೊರೆದು ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗೆ ಮಣ್ಣುಮುಕ್ಕಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದು, ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಸಿಎಂ ಆಗಲಿದ್ದಾರೆ.
ಬಿಜೆಪಿಯ ಘಟನಾನುಘಟಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ್ದರೂ. ಬಿಜೆಪಿ ಟಿಎಂಸಿ ಎದುರು ಮಂಡಿಯೂರಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ವಿಶೇಷವಾಗಿ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿದ್ದರು. ಸಿಎಎ, ಎನ್ ಆರ್ ಸಿ ಮೊದಲಾದ ಜನ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದಾಗ ಮಮತಾ ಬ್ಯಾನರ್ಜಿ, ಈ ಎಲ್ಲ ಸವಾಲುಗಳನ್ನು ಎದುರಿಸಿ, ಜನರ ಸಂಕಷ್ಟದ ಜೊತೆಗಿದ್ದರು. ಇದೇ ಮಮತಾ ಬ್ಯಾನರ್ಜಿಯ ಗೆಲುವಿಗೆ ನೇರ ಕಾರಣವಾಗಿದೆ.
ವ್ಹೀಲ್ ಚೇರ್ ನಲ್ಲಿಯೇ ಕುಳಿತುಕೊಂಡು ಮಮತಾ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. ಅಂತಮವಾಗಿ ಬಿಜೆಪಿಗೆ ಏಕಾಂಗಿಯಾಗಿ ಭರ್ಜರಿಯಾಗಿ ಸೋಲುಣಿಸಿದ್ದಾರೆ.