ಬಿಜೆಪಿಗೆ ತಲೆ ನೋವಾದ ಸ್ವಾಮೀಜಿಗಳು | ಈಶ್ವರಪ್ಪರನ್ನು ಡಿಸಿಎಂ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ಬಿಜೆಪಿಗೆ ಬೆದರಿಕೆ
ಬೆಂಗಳೂರು: ಸ್ವಾಮೀಜಿಗಳ್ಯಾಕೋ ಎಲ್ಲರೂ ಮಠ ಬಿಟ್ಟು ವಿಧಾನ ಸೌಧಕ್ಕೆ ಕಾಲಿಟ್ಟು ರಾಜಕೀಯ ಮಾಡು ಲಕ್ಷಣಗಳು ಕಾಣುತ್ತಿದೆ ಎನ್ನುವ ಭಕ್ತರ ಆತಂಕದ ನಡುವೆಯೇ, ಯಡಿಯೂರಪ್ಪನವರನ್ನು ಬೆಂಬಲಿಸಿದಂತೆಯೇ ಕೆ,ಎಸ್.ಈಶ್ವರಪ್ಪನವರ ಪರವಾಗಿಯೂ ಇದೀಗ ಸ್ವಾಮೀಜಿಗಳು ಸದ್ದು ಮಾಡುತ್ತಿದ್ದಾರೆ.
ಸಿಎಂ ಸ್ಥಾನ ಖಾಲಿ ಇಲ್ಲ ಎನ್ನುವುದು ಅರಿವಾಗುತ್ತಿದ್ದಂತೆಯೇ ಇದೀಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಗಳು ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಕೆ,ಎಸ್.ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು, ಇಲ್ಲದಿದ್ದರೆ, ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕಿದ್ದಾರೆ.
ಸರೂರು ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ ಸ್ವಾಮೀಜಿ, ಮಕಣಾಪುರ ಅಮಘೇಸಿದ್ದೇಶ್ವರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮೀಜಿ, ಅಥಣಿ ಅಮರೇಶ್ವರ ಸ್ವಾಮೀಜಿ, ತುಮಕೂರಿನ ಬಿಂದುಶೇಖರ ಒಡೆಯರು, ಅರಿಕೇರಿ ಅಪ್ಪು ಒಡೆಯರು, ಹುಲಜಂತಿಯ ಮಾಳಿಂಗರಾಯ ಸ್ವಾಮಿಗಳು ಕೆ.ಎಸ್.ಈಶ್ವರಪ್ಪ ಪರವಾಗಿ ಸದ್ದು ಮಾಡಿದ್ದಾರೆ.
ಶಾಂತಮಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಈಶ್ವರಪ್ಪ ಪಕ್ಷಕ್ಕಾಗಿ ಬದುಕಿದ್ದಾರೆ. ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಬರಲು ಹಾಲುಮತ ಸಮುದಾಯದ ಕೊಡುಗೆ ಇದೆ. ಹಿರಿಯ ಜೀವಿ ಈಶ್ವರಪ್ಪನವರನ್ನು ಕಡೆಗಣಿಸಿದರೆ, ನಾವು ಏನ್ ಮಾಡ್ತೀವಿ ಎಂದು ಈಗ ಹೇಳುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಮಾಡಿ ತೋರಿಸುತ್ತೇವೆ ಎಂದು ಬೆದರಿಸಿದರು.
ಈಶ್ವರಪ್ಪಗೆ ಸಿಎಂ ಸ್ಥಾನ ಸಿಗಬೇಕಿತ್ತು. ಆದರೆ ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ. ಯಡಿಯೂರಪ್ಪನವರಂತೆಯೇ ಈಶ್ವರಪ್ಪನವರು ಕೂಡ ಪಕ್ಷ ಕಟ್ಟಲು ಸೈಕಲ್ ತುಳಿದಿದ್ದಾರೆ. ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆ ಇತ್ತು ಅದು ಸಿಗಲಿಲ್ಲ. ಈ ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ಅವರಿಗೆ ನೀಡಲೇ ಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ನಾಳೆಯಿಂದ ಹೊಸ ಬದಲಾವಣೆ
ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ
ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ
ಮಗುಚಿ ಬಿದ್ದ ಆಟೋ ರಿಕ್ಷಾ: ವೃದ್ಧ ಸ್ಥಳದಲ್ಲಿಯೇ ಸಾವು, ಇಬ್ಬರ ಸ್ಥಿತಿ ಗಂಭೀರ
ಅರ್ಚಕ ನೀಡಿದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ ಭೇದಿ | 20ಕ್ಕೂ ಅಧಿಕ ಅಸ್ವಸ್ಥ