ಕೇರಳದಲ್ಲಿ ಬಿಜೆಪಿ ಗೆದ್ದರೆ ಗುಣಮಟ್ಟದ ಗೋಮಾಂಸ ವಿತರಣೆ | ಏನಿದು ಅಚ್ಚರಿಯ ಸುದ್ದಿ?
04/03/2021
ತಿರುವನಂತಪುರಂ: ಬಿಜೆಪಿ ಅಧಿಕಾರಕ್ಕೆ ಬಂದರೆ, ಕೇರಳದ ಜನತೆಗೆ ಗುಣಮಟ್ಟದ ಗೋಮಾಂಸವನ್ನು ನೀಡುವುದಾಗಿ ಬಿಜೆಪಿ ಮುಖಂಡ ಎನ್.ಶ್ರೀಪ್ರಕಾಶ್ ಹೇಳಿದ್ದು, ಕೇರಳದಲ್ಲಿ ಮತದಾರರಿಗೆ ಅವರು ಈ ಭರವಸೆಯನ್ನು ನೀಡಿದ್ದಾರೆ.
ಕೇರಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ, ಬಿಜೆಪಿಯು ಉತ್ತಮ ಗುಣಮಟ್ಟದ ಗೋಮಾಂಸವನ್ನು ರಾಜ್ಯದ ಜನತೆಗೆ ಒದಗಿಸುವುದಾಗಿ ಹೇಳಿದ್ದು, ಕೇರಳದ ಜನತೆಯಲ್ಲಿ ಮಾತ್ರವಲ್ಲದೇ ದೇಶದ ಜನತೆಯಲ್ಲಿ ಈ ಹೇಳಿಕೆ ಅಚ್ಚರಿಯನ್ನು ಮೂಡಿಸಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಕ್ಕೆ ಬಿಜೆಪಿ ಮುಂದಾಗಿದೆ. ಈ ನಡುವೆ ಕೇರಳದಲ್ಲಿ ಬಿಜೆಪಿ ಮುಖಂಡರಾಗಿರುವ ಶ್ರೀಪ್ರಕಾಶ್ ಅವರು ಗುಣಮಟ್ಟದ ಗೋಮಾಂಸ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದ್ದಾರೆ.