ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು | ಮಾಜಿ ಸಂಸದ ಚಂದ್ರಪ್ಪ ಆಕ್ರೋಶ
ಚಿತ್ರದುರ್ಗ: ಬಿಜೆಪಿ ಜನಾಶೀರ್ವಾದ ಯಾತ್ರೆ ಮಾಡುವ ಬದಲು, ಜನರ ಬಳಿ, ಕ್ಷಮೆ ಯಾಚನೆ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧ್ಯಮ ವಕ್ತಾರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಚಂದ್ರಪ್ಪ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಟೀಕಿಸಿದ್ದಾರೆ.
ತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಬಂದಾಗಿನಿಂದಲೂ ದೇಶ ಹಾಗೂ ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೆ ಹೋಗುತ್ತಾರೋ ಅಲ್ಲಲ್ಲಿ ಸುಳ್ಳಿನ ಕಂತೆ ಹೇಳುತ್ತಾರೆ. ಬರೀ ಸುಳ್ಳು ಹೇಳಿ ಹೇಳಿ ಈಗ ಅವರ ಬತ್ತಳಿಕೆಯಲ್ಲಿ ಸುಳ್ಳು ಹೇಳುವುದು ಖಾಲಿಯಾಗಿವೆ. ಹೀಗಾಗಿ ಇಂದು ಕೇಂದ್ರ ಸಚಿವರುಗಳು ಡಂಗೂರ ಹೊಡೆದುಕೊಂಡು, ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಇಂತಹ ಯಾತ್ರೆ ಮಾಡುತ್ತಿದ್ದಾರೆ. ಇದರ ಅವಶ್ಯಕತೆಯಿತ್ತಾ ಎಂದು ಪ್ರಶ್ನಿಸಿದ ಅವರು, ನಿಜವಾದ ಜನಾಶೀರ್ವಾದ ಕೇಳಬೇಕಾದವರು ಕಾಂಗ್ರೆಸ್ ಪಕ್ಷದವರು, ಬಿಜೆಪಿಯವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಳು…
ಕೊಲೆ ಆರೋಪಿ ಭವ್ಯ ಸ್ವಾಗತ: ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಗೆ ಶ್ರೇಷ್ಠರು: ಬಿಜೆಪಿ ಟೀಕೆ
ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್
ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ
ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ
ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್