ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟ | ಕಾರ್ಯಕರ್ತರ ಜೇಬಿಗೆ ಕತ್ತರಿ - Mahanayaka
8:20 PM Wednesday 11 - December 2024

ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟ | ಕಾರ್ಯಕರ್ತರ ಜೇಬಿಗೆ ಕತ್ತರಿ

bjp janashirwada
19/08/2021

ಹಾವೇರಿ: ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟದಿಂದಾಗಿ ಬಿಜೆಪಿ ಕಾರ್ಯಕರ್ತರು ಹಣ ಕಳೆದುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಹಾವೇರಿಗೆ ಇಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಇಂದು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಜನಾಶೀರ್ವಾದ ಕಾರ್ಯಕ್ರಮದಲ್ಲಿ  ಸಚಿವರಿಗೆ ಆಶೀರ್ವಾದ ಮಾಡಲು ಬಂದವರ ಪೈಕಿ ಕಳ್ಳರು ಕೂಡ ಸೇರಿಕೊಂಡಿದ್ದು, ತೀವ್ರ ಜನ ಸಂದಣಿಯ ವೇಳೆ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಿದ್ದಾರೆ. ಜನಾಶೀರ್ವಾದ ಯಾತ್ರೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸುಮಾರು ಮೂವರು ಕಾರ್ಯಕರ್ತರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹಾವೇರಿ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಜೇಬಿಗೆ ಕಳ್ಳರು ಕನ್ನ ಹಾಕಿದ್ದಾರೆ. ಸುಮಾರು 20 ಸಾವಿರಕ್ಕೂ ಅಧಿಕ ಹಣವನ್ನು ಬಿಜೆಪಿ ಕಾರ್ಯಕರ್ತರು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇತ್ತ ಜನಾಶೀರ್ವಾದದ ಯಾತ್ರೆಯ ಸಂಭ್ರಮದಲ್ಲಿದ್ದ ಕಾರ್ಯಕರ್ತರು ಇದೀಗ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?

ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ! | ಆತಂಕದಲ್ಲಿ ಸಂಬಂಧಿಕರು

ತಮಿಳುನಾಡಿನಂತೆ ಕರ್ನಾಟಕದಲ್ಲಿಯೂ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಯಾವ ದೇಶದಲ್ಲಿ ಆಶ್ರಯ ಪಡೆದಿದ್ದು ಗೊತ್ತಾ? | ಕೊನೆಗೂ ಬಯಲಾಯ್ತು ರಹಸ್ಯ

ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

ಇತ್ತೀಚಿನ ಸುದ್ದಿ