ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ! - Mahanayaka
1:15 AM Wednesday 11 - December 2024

ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

tumakur crime news
14/08/2021

ತುಮಕೂರು: ಮಹಿಳೆಯೊಬ್ಬಳ ಸಹಕಾರದೊಂದಿಗೆ 10ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಇಬ್ಬರು ಕಾಮುಕರು ಅತ್ಯಾಚಾರ ನಡೆಸಿದ ಘಟನೆ  ತುಮಕೂರಿನ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಪೈಕಿ ಓರ್ವ ಬಿಜೆಪಿ ಕಾರ್ಯಕರ್ತ ಎಂದು ವರದಿಯಾಗಿದೆ.

ಎಲ್ ಐಸಿ ಬಾಂಡ್ ಗೆ ಫೋಟೋ ತೆಗೆದು ವಾಟ್ಸಾಪ್ ಮಾಡಬೇಕು. ಅದು ಹೇಗೆಂದು ತೋರಿಸು ಎಂದು ಮಹಿಳೆಯು ಬಾಲಕಿಯನ್ನ ಕರೆದುಕೊಂಡು ಹೋಗಿ ಗ್ರಾಮದ ಅಜ್ಜಿಯೊಬ್ಬರ ಮನೆಯ ಒಳಗೆ  ಕರೆದೊಯ್ದು ಬಿಟ್ಟು ಬಾಗಿಲು ಹಾಕಿ ಪರಾರಿಯಾಗಿದ್ದಾಳೆ. ಈ ವೇಳೆ ಮನೆಯೊಳಗಿದ್ದ ಇಬ್ಬರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕಿ ಮನೆಯೊಳಗೆ ಹೋದ ವೇಳೆ ಮನೆಯೊಳಗಿದ್ದ ಇಬ್ಬರು ಆರೋಪಿಗಳು ಬಾಲಕಿಯ ಕೈಗೆ ಹಾಗೂ ಬಾಯಿಗೆ ಪ್ಲಾಸ್ಟರ್ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜೊತೆಗೆ ಈ ವಿಚಾರ ಯಾರಿಗಾದರೂ ತಿಳಿಸಿದರೆ, ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಘಟನೆಯ ಬಳಿಕ ಬಾಲಕಿಯು ತೀವ್ರವಾಗಿ ಆಘಾತಕ್ಕೊಳಗಾಗಿದ್ದು, ಆಕೆ ಅಳುತ್ತಾ ಬಂದು ತನ್ನ ಅಜ್ಜಿಗೆ ಎಲ್ಲ ವಿಚಾರವನ್ನು ತಿಳಿಸಿದ್ದಾಳೆ. ಈ ವೇಳೆ ಸ್ಥಳಕ್ಕೆ ಹೋಗಿ ನೋಡಿದಾಗ ಆರೋಪಿಗಳಿಬ್ಬರು ಪರಾರಿಯಾಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಕೋಡಿಗೇನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಗಳಲ್ಲಿ ಓರ್ವ ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದು, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಎನ್ನಲಾಗಿದೆ. ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಆತ, ಗ್ರಾಮದಲ್ಲಿ ಓಡಾಡುತ್ತಾ, ಬಿಜೆಪಿಯಲ್ಲಿರುವ ಕಾರಣ ಯಾರೂ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಓಡಾಡುತ್ತಿದ್ದ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಹೆಸರು  ತಿಳಿದು ಬಂದಿಲ್ಲ.

ಇನ್ನಷ್ಟು ಸುದ್ದಿಗಳು…

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಲಾಕ್ ಡೌನ್ ನಿಂದಾಗಿ ಅಡುಗೆ ಭಟ್ಟ ದರೋಡೆಕೋರನಾದ!

ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ ಶಿವರಾಮ್ ಹೆಬ್ಬಾರ್!

ಮೇಕೆದಾಟಿಸಲಾಗದೇ ನೆಹರೂ, ಇಂದಿರಾ ಗಾಂಧಿ ಹೆಸರು ಎಳೆದು ತಂದರೇ ಸಿ.ಟಿ.ರವಿ?

ಮತಾಂತರದ ಆರೋಪ ಹೊರಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಬಜರಂಗದಳ ದಾಳಿ!

ಅಧಿಕಾರಕ್ಕೆ ಬಂದ ತಕ್ಷಣವೇ ಜಾತಿಗಣತಿ ವರದಿ ಚರ್ಚೆಗಿಡುತ್ತೇನೆ | ಸಿದ್ದರಾಮಯ್ಯ ಹೇಳಿಕೆ

ಇತ್ತೀಚಿನ ಸುದ್ದಿ