ಬಿಜೆಪಿ ಕಾರ್ಯಕರ್ತ, ವಕ್ಫ್ ಬೋರ್ಡ್ ಸದಸ್ಯನಿಗೆ ಜೀವ ಬೆದರಿಕೆ - Mahanayaka

ಬಿಜೆಪಿ ಕಾರ್ಯಕರ್ತ, ವಕ್ಫ್ ಬೋರ್ಡ್ ಸದಸ್ಯನಿಗೆ ಜೀವ ಬೆದರಿಕೆ

kaliddu
20/08/2022

ಮಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಖಾಲೀದ್ ನಂದಾವರ ಇವರು ತನಗೆ ಜೀವಬೆದರಿಕೆ ಇದೆ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ ಪಿಗೆ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಖಾಲಿದ್ ನಂದಾವರ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಜೊತೆಗೆ ಆರ್ ಟಿಐ ಕಾರ್ಯಕರ್ತ. ಬಂಟ್ವಾಳದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ, ಮರಳುಗಾರಿಕೆ ಸೇರಿ ಹಲವು ಅಕ್ರಮಗಳ ವಿರುದ್ಧ ಆಯಾ ಇಲಾಖೆಗೆ ಲಿಖಿತ ದೂರು ನೀಡುತ್ತಿದ್ದರು.

ಈ ಬಗ್ಗೆ ಕೊಲ್ಲಿ ರಾಷ್ಟ್ರಗಳಿಂದ ಅವರಿಗೆ ಜೀವಬೆದರಿಕೆ ಕರೆಗಳು ಬರುತ್ತಿತ್ತು. ಈ ಕುರಿತು ಈ ಹಿಂದೆ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಆಗಸ್ಟ್ 18 ರಂದು ಖಾಲಿದ್ ಅವರ ಸ್ನೇಹಿತರೊಬ್ಬರು ಕರೆ ಮಾಡಿ, ‘ನೀವು ಸ್ವಲ್ಪ ದಿನ ಹುಷಾರಾಗಿರಿ.


Provided by

ನಿಮ್ಮ ಮೇಲೆ ದಾಳಿ ನಡೆಸುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಖಾಲಿದ್ ಅವರು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ