ಅಮಿತ್ ಶಾಗೆ ಪ್ರಶ್ನೆ ಮಾಡಿದ್ದಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಮೇಲೆ ಅಣ್ಣಾಮಲೈ ಕೋಪ: ಅಷ್ಟಕ್ಕೂ ಸ್ಟಾಲಿನ್ ಏನ್ ಹೇಳಿದ್ದರು ಗೊತ್ತೇ..?

12/06/2023

ತಮಿಳುನಾಡಿನಲ್ಲಿ ಸ್ವತಃ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಿಜೆಪಿ ವಿರುದ್ಧ ಮಾತಿನ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಇದು.

ಕಳೆದ 9 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲೆಸೆದಿದ್ದಾರೆ. ಅಮಿತ್ ಶಾ ಚೆನ್ನೈ ಭೇಟಿಗೆ ಒಂದು ದಿನ ಮೊದಲು ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಸಿಎಂ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಈ ಸ್ಥಾನದಲ್ಲಿರಲು ಕಾರಣ ವಂಶಾಡಳಿತ ರಾಜಕಾರಣ. ದಯವಿಟ್ಟು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ ಎಂದಿದ್ದಾರೆ.

ಇನ್ನು ಅಣ್ಣಾಮಲೈ ಕೋಪಕ್ಕೆ ಕಾರಣವಾಗಿದ್ದು ಸ್ಟಾಲಿನ್ ರ ಈ ಹೇಳಿಕೆ. ಸ್ಟಾಲಿನ್ ಅವರು ಈ ರೀತಿ ಹೇಳಿದ್ದರು. ‘ಕಳೆದ ಎರಡು ದಿನಗಳಿಂದ ಕೇಂದ್ರ ಗೃಹ ಸಚಿವರು ಚೆನ್ನೈಗೆ ಬರುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಇದೆಲ್ಲವೂ 2024ರ ಚುನಾವಣೆಗೆ ಅವರ ತಯಾರಿಯ ಭಾಗವಾಗಿದೆ. ಆದಾಗ್ಯೂ, ಕಳೆದ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿಗೆ ಅನುಕೂಲವಾಗುವಂತೆ ಕೇಂದ್ರವು ಮಾಡಿರುವ ಕೆಲಸಗಳ ಪಟ್ಟಿಯನ್ನು ಅವರು ನನಗೆ ನೀಡಬಹುದೇ ಎಂದು ನಾನು ಕೇಳಲು ಬಯಸುತ್ತೇನೆ ಎಂದಿದ್ದರು ಅವರು.

ಅಲ್ಲದೇ ತಮಿಳುನಾಡಿನಲ್ಲಿ ಬಿಜೆಪಿ ಹಿಂದಿ ಮತ್ತು ಸಂಸ್ಕೃತವನ್ನು ಹೇರುತ್ತಿದೆ ಎಂದು ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ ಅಣ್ಣಾಮಲೈ, ನಿಮ್ಮ ಪಕ್ಷವು ತಮಿಳು ಭಾಷೆ ಮತ್ತು ಸಂಸ್ಕೃತಿ ಎಂದಿಗೂ ತಮಿಳುನಾಡಿನ ಗಡಿಯನ್ನು ದಾಟದಂತೆ ನೋಡಿಕೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಯಾದ ನಮ್ಮ ತಮಿಳಿಗೆ ಅತ್ಯಂತ ದೊಡ್ಡ ಅಪಚಾರ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version