ಬಿಜೆಪಿಯ ಜನದರ್ಶನ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ವೇದಿಕೆಯಿಂದ ಕೆಳಗೆ ಬಿದ್ದ ಬಿಜೆಪಿ ನಾಯಕ | ವಿಡಿಯೋ ವೈರಲ್ - Mahanayaka
9:15 AM Tuesday 24 - December 2024

ಬಿಜೆಪಿಯ ಜನದರ್ಶನ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ವೇದಿಕೆಯಿಂದ ಕೆಳಗೆ ಬಿದ್ದ ಬಿಜೆಪಿ ನಾಯಕ | ವಿಡಿಯೋ ವೈರಲ್

jagdish jaiswal
29/09/2021

ಖಾರ್ಗೋನ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೊಬ್ಬರು ವೇದಿಕೆಯಿಂದ ಬಿದ್ದ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ಖಾರ್ಗೋನ್ ಜಿಲ್ಲೆಯ ಚೈನ್ ಪುರದಲ್ಲಿ ನಡೆದ ಬಿಜೆಪಿಯ ಜನದರ್ಶನ ಯಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಬಿಜೆಪಿ ನಾಯಕ ಜಗದೀಶ್ ಜೈಸ್ವಾಲ್ ಅವರು ಮೈಕ್ ಎತ್ತಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾಗಿದ್ದಾರೆ.

ಸಿಎಂಗೆ ಜೈಕಾರ ಹಾಕುತ್ತಾ, “ಪ್ರದೇಶ ಕಾ ನೇತಾ ಕೈಸಾ ಹೋ” ಎಂದು ಸಭೆಯನ್ನುದ್ದೇಶಿ ಹೇಳುತ್ತಾ, ಮೈ ಮರೆತಿದ್ದ ಜೈಸ್ವಾಲ್ ಅವರು, ವೇದಿಕೆಯ ಅಂಚನ್ನು ತಲುಪಿದ್ದನ್ನೂ ಮರೆತು ಮುಂದೆ ಕಾಲಿಟ್ಟಿದ್ದು, ಈ ವೇಳೆ ಅವರು ಸಮತೋಲನ ಕಳೆದುಕೊಂಡು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ.

ಜೈಸ್ವಾಲ್ ಅವರು ವೇದಿಕೆಯಿಂದ ಕೆಳಗೆ ಬೀಳುತ್ತಿದ್ದಂತೆಯೇ, ಬಿಜೆಪಿ ಕಾರ್ಯಕರ್ತರು ತಕ್ಷಣವೇ ಅವರನ್ನು ಎಬ್ಬಿಸಿ, ಉಪಚರಿಸಿದ್ದಾರೆ. ತಕ್ಷಣದಲ್ಲಿ ನಡೆದ ಈ ಘಟನೆಯಿಂದಾಗಿ ಕ್ಷಣ ಕಾಲ ಎಲ್ಲರೂ ವಿಚಲಿತರಾಗಿದ್ದಾರೆ. ಆದರೆ ಬಳಿಕ ಎಲ್ಲರಿಗೂ ಇದು ನಗು ತರಿಸಿದ್ದು, ಬಿಜೆಪಿ ಕಾರ್ಯಕರ್ತರೇ ಬಿದ್ದು ಬಿದ್ದು ನಕ್ಕಿದ್ದಾರೆ.

ಘಟನೆಯ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ವಿಡಿಯೋ ವ್ಯಾಪಕ ವೈರಲ್ ಆಗಿದೆ. ಜಗದೀಶ್ ಜೈಸ್ವಾಲ್ ಅವರಿಗೆ ಯಾವುದೇ ರೀತಿಯ ಅಪಾಯವಾಗದಿರುವುದು ಅದೃಷ್ಟ ಎಂದೇ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಮೋದೀಜಿಯ ಪ್ರವಾಸದ ಬಗ್ಗೆ ಯಾವುದೇ ವರದಿ ಪ್ರಕಟವಾಗಿಲ್ಲ, ವೈರಲ್ ಫೋಟೋ: ಫೇಕ್ ಪತ್ರಿಕೆ ಸ್ಪಷ್ಟನೆ

ರಾಜ್ಯದಲ್ಲಿ ಮತ್ತೊಂದು ದಲಿತ ದೌರ್ಜನ್ಯ: ಬೆಳ್ಳಂಬೆಳಗ್ಗೆ  ದಲಿತರ ಗುಡಿಸಲುಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು

ವ್ಯಕ್ತಿಗೆ ಕೊವಿಡ್ ಲಸಿಕೆಯ ಬದಲು ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಿದ ನರ್ಸ್!

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ | ತಾಯಿ, ಮಗಳು ದಾರುಣ ಸಾವು

ಕಂಡ ಕಂಡಲ್ಲಿ ಪ್ಯಾಂಟ್ ಬಿಚ್ಚುವ ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ | ಕಾಂಗ್ರೆಸ್

ನಿಮ್ಮ ತಂದೆ ಕೂಡ ಪಂಚೆ ಉಡುವವರಾಗಿರಬಹುದು, ನಿಮ್ಮಂತಹ ಮಗನ ಬಗ್ಗೆ ಅವರೇನು ತಿಳಿಯಬಹುದು? | ಸಿ.ಟಿ.ರವಿಗೆ ಸಿದ್ದು ಗುದ್ದು

ಶಾಕಿಂಗ್ ನ್ಯೂಸ್: ಅಪರಿಚಿತ ತಂಡದಿಂದ ಬೀಡಿ ಬ್ರ್ಯಾಂಚ್ ಗೆ ಹೋಗುತ್ತಿದ್ದ ಬಾಲಕನ ಅಪಹರಣಕ್ಕೆ ಯತ್ನ

ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!

ಇತ್ತೀಚಿನ ಸುದ್ದಿ