ಅಮೀರ್ ಖಾನ್ ನಂತಹವರಿಂದ ದೇಶದ ಜನಸಂಖ್ಯೆ ಹೆಚ್ಚಾಗಿದೆ | ಬಿಜೆಪಿ ಸಂಸದ - Mahanayaka
3:51 AM Wednesday 11 - December 2024

ಅಮೀರ್ ಖಾನ್ ನಂತಹವರಿಂದ ದೇಶದ ಜನಸಂಖ್ಯೆ ಹೆಚ್ಚಾಗಿದೆ | ಬಿಜೆಪಿ ಸಂಸದ

ameer khan sudhir gupta
12/07/2021

ನವದೆಹಲಿ: ಅಮೀರ್ ಖಾನ್ ನಂತಹವರಿಂದ ದೇಶದ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೇಳಿಕೆ ನೀಡಿದ್ದು, ಜನಸಂಖ್ಯಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಾಲಿವುಡ್ ನಟನ ವೈಯಕ್ತಿಕ ಜೀವನವನ್ನು ಎಳೆದುತಂದಿದ್ದಾರೆ.

ಮಧ್ಯಪ್ರದೇಶದ ಮಾಂಡ್ಸೌರ್ ನ ಸಂಸದರಾಗಿರುವ ಸುದೀರ್ ಗುಪ್ತಾ ಈ ಹೇಳಿಕೆ ನೀಡಿದ್ದು, ಅಮೀರ್ ಖಾನ್ ತನ್ನ ಮೊದಲ ಹಾಗೂ ಎರಡನೇ ಪತ್ನಿಯರಿಗೆ ವಿಚ್ಛೇತನ ನೀಡಿದ್ದಾರೆ. ಈ ಇಬ್ಬರು ಹೆಂಡತಿಯರಿಗೂ ಮಕ್ಕಳಿದ್ದಾರೆ. ಇದೀಗ ಅವರಿಗೆ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಅವರು ನಟನ ವೈಯಕ್ತಿಕ ಬದುಕನ್ನು ಕೆದಕಿದರು.

ದೇಶದ ಜನಸಂಖ್ಯೆ 140 ಕೋಟಿಯನ್ನು ತಲುಪಿದಾಗ ಭಾರತದಲ್ಲಿ ವಾಸಿಸಲು ಒಂದಿಂಚು ಭೂಮಿ ಕೂಡ ಉಳಿಯುವುದಿಲ್ಲ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸುಧೀರ್ ಗುಪ್ತಾ ಹೇಳಿದರು.

ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಜನಸಂಖ್ಯಾ ಸ್ಫೋಟ ವಿಚಾರವನ್ನೆತ್ತಿಕೊಂಡಿದ್ದು, ಈ ವಿಚಾರವನ್ನೇ ಚುನಾವಣೆಯ ಪ್ರಮುಖ ವಿಚಾರಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ದೇಶಾದ್ಯಂತ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು:

ಅಪ್ರಾಪ್ತೆಯ ಜೊತೆಗೆ ಒಪ್ಪಿತ ದೈಹಿಕ ಸಂಪರ್ಕವೂ ಕಾನೂನು ಸಮ್ಮತವಲ್ಲ: ಹೈಕೋರ್ಟ್

ತಂಗಿ ಮತ್ತು ಆಕೆಯ ಮಗನನ್ನು ಕೊಂದ ವೈದ್ಯ ದಂಪತಿಯನ್ನು ನಡುರಸ್ತೆಯಲ್ಲಿ ಮುಗಿಸಿದ ಅಣ್ಣ!

ಶಂಕಿತ ಆರೋಗ್ಯ ಕಾರ್ಯಕರ್ತ ನೀಡಿದ ಮಾತ್ರೆ ಸೇವಿಸಿ ಮಹಿಳೆ ಸಾವು | ಮೂವರು ಅಸ್ವಸ್ಥ

ಮಹಿಳೆಯನ್ನು ಕಾಡಿನಲ್ಲಿ ಒತ್ತೆಯಾಳಾಗಿರಿಸಿ 3 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ