ಫೋಟೋ ತೆಗೆಯಲು ಬಂದಿದ್ದೇ ತಪ್ಪಂತೆ: ಕಾರ್ಯಕರ್ತನನ್ನು ತುಳಿದ ಬಿಜೆಪಿ ನಾಯಕ
ಫೋಟೋ ತೆಗೆಯುವ ವೇಳೆ ತನ್ನ ಬಳಿ ಬಂದ ಕಾರ್ಯಕರ್ತನನ್ನು ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾವು ಸಾಹೇಬ್ ಕಾಲಿನಿಂದ ತುಳಿದು ದೂರ ತಳ್ಳಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಬಿಡುಗಡೆಗೊಂಡ ಬಳಿಕ ಮಹಾರಾಷ್ಟ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿವಸೇನೆಯ ಶಿಂಧೆ ಬಣದ ಅಭ್ಯರ್ಥಿ ಅರ್ಜುನ್ ಖೋತ್ಕರಿ ಜೊತೆ ಫೋಟೋ ತೆಗೆಯುತ್ತಿರುವ ವೇಳೆ ಪಕ್ಷದ ಕಾರ್ಯಕರ್ತ ನಾಯಕನ ಹತ್ತಿರಕ್ಕೆ ಬಂದಿದ್ದ. ಈ ರಾವು ಸಾಹೇಬ್ ಆತನನ್ನು ಕಾಲಿನಿಂದ ತುಳಿದು ದೂರ ಮಾಡುವ ದೃಶ್ಯ ವಿಡಿಯೋದಲ್ಲಿದೆ.
ಮಹಾರಾಷ್ಟ್ರದ ಜಲ್ನಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇವರ ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಮಹಾಯುತಿ ಸರ್ಕಾರ ಒಂದುವೇಳೆ ಅಧಿಕಾರಕ್ಕೆ ಮರಳಿ ಬಂದರೆ ಅದು ಜನರೊಂದಿಗೆ ಇದೇ ರೀತಿಯಲ್ಲಿ ವರ್ತಿಸಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಿಜೆಪಿ ಮೈತ್ರಿ ಕೂಟಕ್ಕೆ ಮುಜುಗರವನ್ನು ತರಿಸಿದ್ದು ಜನರು ಸಾರ್ವತ್ರಿಕವಾಗಿ ಪ್ರಶ್ನಿಸುತ್ತಿರುವುದನ್ನು ತಪ್ಪಿಸಿಕೊಳ್ಳಲು ಹೆಣಕಾಡುತ್ತಿದೆ. ಅಸೆಂಬ್ಲಿ ಚುನಾವಣೆಯ ಪ್ರಚಾರ ಜೋರಾಗಿದ್ದು ಮಹಾಅಗಾಢಿ ಮೈತ್ರಿಕೂಟವು ಈ ಘಟನೆಯನ್ನು ಎತ್ತಿಕೊಂಡು ಮಹಾಯುತಿ ಸರ್ಕಾರದ ಮೇಲೆ ಮುಗಿಬಿದ್ದಿದೆ. ಮಹಾಯುತಿ ಸರ್ಕಾರಕ್ಕೆ ಮರಳಿ ಅಧಿಕಾರವನ್ನು ನೀಡಿದರೆ ಮಹಾರಾಷ್ಟ್ರಿಯನ್ನರ ಯಾವ ಹಕ್ಕುಗಳೂ ಸಂರಕ್ಷಿಸಲಾರವು ಎಂದು ಮಹಾ ಅಗಾಢಿ ನಾಯಕರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj