ಹಸುವಿನ ಕೆಚ್ಚಲು ಕೊಯ್ದ ಪ್ರಕರಣ: ಮಾಲಿಕನ ಮನೆಗೆ ಬಿಜೆಪಿ ನಾಯಕರ ಭೇಟಿ, 1 ಲಕ್ಷ ಪರಿಹಾರ - Mahanayaka

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ: ಮಾಲಿಕನ ಮನೆಗೆ ಬಿಜೆಪಿ ನಾಯಕರ ಭೇಟಿ, 1 ಲಕ್ಷ ಪರಿಹಾರ

bjp cow
14/01/2025

ಬೆಂಗಳೂರು: ಕಿಡಿಗೇಡಿಯೊಬ್ಬ ಹಸುವಿನ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರು ಘಟನೆಯನ್ನು ಖಂಡಿಸಿ, ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ.


Provided by

ಚಾಮರಾಜಪೇಟೆಯಲ್ಲಿ ಕಿಡಿಗೇಡಿಯೊಬ್ಬ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ. ಈ ಘಟನೆಯನ್ನು ಖಂಡಿಸಿದ್ದ ಬಿಜೆಪಿ ನಾಯಕರ ನಿಯೋಗ ಇದೀಗ ಹಸುವಿನ ಮಾಲಿಕನ ಮನೆಗೆ ಭೇಟಿ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪಿ.ಸಿ. ಮೋಹನ್, ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ. ಇದೇ ವೇಳೆ ಗೋಪೂಜೆ ಮಾಡಿ, ಗೋವಿಗೆ ಬಾಳೆ ಹಣ್ಣು ಬೆಲ್ಲ ನೀಡಿದ್ದಾರೆ. ಜೊತೆಗೆ ಆರ್.ಅಶೋಕ್ ಅವರು ಹಸುವಿನ ಮಾಲಿಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಿದರು.


Provided by

ಇದೇ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಮೊನ್ನೆ ದಿನ ಹಸು ಕೆಚ್ಚಲು ಕೊಯ್ದ ದುರ್ಘಟನೆ ನಡೆದಿತ್ತು. ಯಾವ ಪುಣ್ಯ ಭೂಮಿಯ ಮೇಲೆ ನಾವೆಲ್ಲ ಗೋ ಮಾತೆ ಪೂಜೆ ಮಾಡುತ್ತೇವೆ, ತಾಯಿ, ದೇವರ ಸಮಾನವಾಗಿ ಕಾಣ್ತೀವಿ ಅಂತಹ ಗೋವಿಗೆ ಏನಾಗಿದೆ ಅಂತ ರಾಜ್ಯದ, ದೇಶದ ಜನ ಗಮನಿಸಿದ್ದಾರೆ. ಹೀಗೆ ನಡೆದಿರುವುದು ಅಕ್ಷಮ್ಯ, ಸಿದ್ದರಾಮಯ್ಯ ಸಿಎಂ ಆದ ಬಳಿಕ ಗೋರಕ್ಷಣೆ ಆಗುತ್ತಿಲ್ಲ ಎಂದು ಆರೋಪಿಸಿದರು.

ಆರ್.ಅಶೋಕ್ ಮಾತನಾಡಿ, ಘಟನೆ ನಡೆದ ಕೂಡಲೇ ನಾನು ಸ್ಥಳಕ್ಕೆ ಬಂದಿದ್ದೆ, ರಕ್ತ ಹರಿಯುತ್ತಿತ್ತು, ಕೆಚ್ಚಲು ಕತ್ತರಿಸಿದ್ದು ನಾನು ನೋಡಿದೆ. ಬಂಧಿತನು ಯಾವಾಗಲು ಬ್ಲೇಡ್ ಇಟ್ಟುಕೊಳ್ಳುತ್ತಿದ್ದ ಎಂದು ಹೇಳುತ್ತಾರೆ. ಮನುಷ್ಯತ್ವ ಇರುವವರು ಈ ರೀತಿ ವರ್ತಿಸಲ್ಲ. ಜಿಹಾದಿಗಳು ಈ ಕೆಲಸ ಮಾಡಿದ್ದಾರೆ. ಯಾರನ್ನೋ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ಪೊಲೀಸರು ಹಾಗೂ ಸರ್ಕಾರದ ಮೇಲೆ ಅನುಮಾನ ಬರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ