ಬ್ರೇಕಿಂಗ್ ನ್ಯೂಸ್ : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಶಾಸಕ ಕೊವಿಡ್ ಗೆ ಬಲಿ
19/05/2021
ಜೈಪುರ: ಕೊವಿಡ್ 19 ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಶಾಸಕರೋರ್ವರು ಕೊರೊನಾ ವೈರಸ್ ಗೆ ಬಲಿಯಾದ ಘಟನೆ ಉದಯಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ರಾಜಸ್ಥಾನದ ಬಿಜೆಪಿ ಶಾಸಕ ಗೌತಮ್ ಲಾಲ್ ಮೀನಾ ಮೃತಪಟ್ಟವರಾಗಿದ್ದು, ಇವರು ರಾಜಸ್ಥಾನದಲ್ಲಿ ಕೊವಿಡ್ ಸೋಂಕಿಗೆ ಬಲಿಯಾಗಿರುವ ಶಾಸಕರ ಪೈಕಿ ನಾಲ್ಕನೆಯವರಾಗಿದ್ದಾರೆ.
ಕೊವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಉದಯಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷ ವಯಸ್ಸಿನ ಗೌತಮ್ ಲಾಲ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೌತಮ್ ಲಾಲ್ ಮೀನಾ ಅವರು ರಾಜಸ್ಥಾನದ ಪ್ರತಾಪ್ ಗಢ ಜಿಲ್ಲೆಯ ಧರಿಯಾವಾಡ್ ಕ್ಷೇತ್ರದ ಶಾಸಕರಾಗಿದ್ದರು.
ಗೌತಮ್ ಲಾಲ್ ಮೀನಾ ಅವರ ನಿಧನಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೊನಿಯಾ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.