ಸಮುದ್ರಕ್ಕೆ ಹಾರಿ ಯುವಕರನ್ನು ರಕ್ಷಿಸಿದ ಶಾಸಕ..!
ಸಮುದ್ರಕ್ಕೆ ಬಿದ್ದು ಮುಳುಗುತ್ತಿದ್ದ ಮೂವರು ಯುವಕರನ್ನು ಬಿಜೆಪಿ ಶಾಸಕರೊಬ್ಬರು ಸಮುದ್ರಕ್ಕೆ ಹಾರಿ ರಕ್ಷಿಸಿರುವ ಘಟನೆ ಗುಜರಾತ್ ನ ಅಮ್ರೇಲಿ ಜಿಲ್ಲೆಯ ಪಟ್ವಾ ಗ್ರಾಮದ ಬಳಿ ನಡೆದಿದೆ.
ರಾಜುಲಾ ಶಾಸಕ ಹೀರಾ ಸೋಲಂಕಿ ಯುವಕರನ್ನು ರಕ್ಷಿಸಿದವರು. ಕಲ್ಪೆಶ್ ಶಿವಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ, ಜೀವನ್ ಗುಜಾರಿಯಾ ಎಂಬ ನಾಲ್ವರು ಯುವಕರು ಸಮುದ್ರಕ್ಕೆ ಸ್ನಾನಕ್ಕೆಂದು ತೆರಳಿದ್ದರು. ಈ ಸಮಯದಲ್ಲಿ ಅವರು ನೀರಲ್ಲಿ ಮುಳುಗಿದ್ದಾರೆ.
ಇದನ್ನು ಕಂಡ ಸ್ಥಳೀಯರು ಕಡಲ ತೀರದಲ್ಲಿರುವ ರಾಜುಲಾ ಶಾಸಕ ಹೀರಾ ಸೋಲಂಕಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶಾಸಕರು ಬೋಟ್ ಸಹಾಯದಿಂದ ಸ್ಥಳಕ್ಕಾಗಮಿಸಿ ನೀರಿನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾರೆ.
ಇದೇ ವೇಳೆ ನಾಲ್ವರಲ್ಲಿ ಮೂವರು ಯುವಕರು ರಕ್ಷಿಸಲ್ಪಟ್ಟಿದ್ದು ಜೀವನ್ ಗುಜಾರಿಯಾ ಎಂಬ ಯುವಕ ಮೃತಪಟ್ಟಿದ್ದಾನೆ. ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw