ಪೊಲೀಸ್ ಕಾನ್ ಸ್ಟೆಬಲ್ ಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ

bjp mla sunil kamble
06/01/2024

ಪುಣೆ: ಕರ್ತವ್ಯ ನಿರತ ಪೊಲೀಸ್ ಕಾನ್’ಸ್ಟೆಬಲ್‌ ಗೆ ಬಿಜೆಪಿ ಶಾಸಕರೊಬ್ಬರು ಕಪಾಳಮೋಕ್ಷ ಮಾಡಿರುವ ಸಂಬಂಧ ಶಾಸಕನ ವಿರುದ್ಧ ಶನಿವಾರ ದೂರು ದಾಖಲಾಗಿದೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ಈ ಘಟನೆ ನಡೆದಿದೆ. ಪುಣೆ ಕಂಟೋನ್ಮೆಂಟ್ ಕ್ಷೇತ್ರದ ಶಾಸಕ ಸುನಿಲ್ ಕಾಂಬ್ಳೆ ಅವರು, ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್’ಸ್ಟೆಬಲ್ ಗೆ ಕಪಾಳಮೋಕ್ಷ ಮಾಡಿದ್ದಾರೆ.

ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವೇದಿಕೆಯಿಂದ ಇಳಿದು ಬರುತ್ತಿದ್ದ ಶಾಸಕರು ದಾರಿಯಲ್ಲಿದ್ದ ಕಾನ್ ಸ್ಟೇಬಲ್ ಮೇಲೆ ಕೋಪಗೊಂಡು ಏಕಾಏಕಿ ಕಪಾಳಕ್ಕೆ ಹೊಡೆದಿದ್ದಾರೆ.

ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರ ದರ್ಪದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.


 

ಇತ್ತೀಚಿನ ಸುದ್ದಿ

Exit mobile version