ಬೆಡ್ ಬ್ಲಾಕಿಂಗ್ ದಂಧೆ: ಬಿಜೆಪಿ ಶಾಸಕ ಸತೀಶ್ ರೆಡ್ಡಿಯ ಆಪ್ತ ಅರೆಸ್ಟ್

sathish reddy babu
25/05/2021

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿಯ ಆಪ್ತ ಬಾಬು ಎಂಬಾತನನ್ನು ಬಂಧಿಸಿದ್ದು, ಮುಸ್ಲಿಮರ ಕಡೆಗೆ ಕೈ ತೋರಿಸಿ ಪ್ರಕರಣವನ್ನು ತಿರುಚಲು ಯತ್ನಿಸಿದ ಬಿಜೆಪಿ ಸಂಸದ  ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಪಕ್ಷಕ್ಕೆ ಈ ಘಟನೆ ಮುಜುಗರ ಉಂಟು ಮಾಡಿದೆ.

ದಕ್ಷಿಣ ವಿಭಾಗ ಹಾಗೂ ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಮ್‌ನಲ್ಲಿ ಸಿಬ್ಬಂದಿಗೆ ಬೆದರಿಸಿ ಬೆಡ್ ಹಂಚಿಕೆ ಮಾಡಿದ್ದ ಆರೋಪ ಬಾಬು ಮೇಲೆ ಕೇಳಿ ಬಂದಿತ್ತು. ಈ ಕುರಿತ ಕೆಲವು ಸಿಸಿಟಿವಿ ದೃಶ್ಯಗಳು ಹೊರಗೆ ಬಂದಿದ್ದವು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಬಾಬುಗೆ ನೋಟಿಸ್ ನೀಡಿದ್ದರು. ಆದರೂ ಬಂದಿರಲಿಲ್ಲ. ಇದೀಗ ಕೋವಿಡ್‌ನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಬಾಬುನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕೋವಿಡ್ ವಾರ್ ರೂಮ್ ಸಿಬ್ಬಂದಿಯನ್ನು ಹೆದರಿಸಿ ತನಗೆ ಬೇಕಾದವರಿಗೆ ಐಸಿಯು ಬೆಡ್ ಕೊಡಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ತನ್ನ ಆಪ್ತರನ್ನು ಬಳಸಿಕೊಂಡು ಕೊವಿಡ್ ವಾರ್ ರೂಮ್ ನ ಸಿಬ್ಬಂದಿಯನ್ನು ಬೆದರಿಸಿ ತನಗೆ ಬೇಕಾದವರಿಗೆ ಬೆಡ್ ಕೊಡಿಸುತ್ತಿದ್ದ. ಬಿಜೆಪಿಯವರೇ ಬೆಡ್ ನ ಕೃತಕ ಅಭಾವ ಸೃಷ್ಟಿಸಿದ ಬಳಿಕ ಸಂಸದ ತೇಜಸ್ವಿ ಸೂರ್ಯ ಕೊವಿಡ್ ವಾರ್ ಗೆ ಹೋಗಿ ಹೈಡ್ರಾಮಾ ಆಡಿದ್ದರು. ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಮ್ ಸಮುದಾಯದ ನೌಕರರನ್ನು ಗುರಿಯಾಗಿಸಿ ಪ್ರೆಸ್ ಮೀಟ್ ನಡೆಸಿ ಸುಳ್ಳು ಮಾಹಿತಿ ಹರಡಿ, ಮುಸ್ಲಿಮರ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದರು.

ಇತ್ತೀಚಿನ ಸುದ್ದಿ

Exit mobile version