ಜಿಲೆಟಿನ್ ಸ್ಫೋಟ ದುರಂತ: ತಲೆಮರೆಸಿಕೊಂಡಿದ್ದ ಬಿಜೆಪಿ ಮುಖಂಡನ ಬಂಧನ
25/02/2021
ಚಿಕ್ಕಬಳ್ಳಾಪುರ: ಜಿಲೆಟಿನ್ ಸ್ಫೋಟ ದುರಂತ ಪ್ರಕರಣದ ಆರೋಪಿ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ರೆಡ್ಡಿ ತಲೆ ಮರೆಸಿಕೊಂಡಿದ್ದು, ಇದೀಗ ರೆಡ್ಡಿಗೆ ಸ್ಫೋಟಕವನ್ನು ಪೂರೈಸುತ್ತಿದ್ದ ಗಣೇಶ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚಿಕ್ಕಬಳ್ಳಾಪುರದ ಹಿರೇನಸಗವಲ್ಲಿಯ ಭ್ರಮರವಾಸಿನಿ ಕ್ರಷತ್ ಬಳಿ ಜಿಲೆಟಿನ್ ಸ್ಫೋಟ ನಡೆದು ದುರಂತ ಸಂಭವಿಸಿತ್ತು. ಈ ಘಟನೆಗೆ ಪೊಲೀಸ್ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗುಡಿಬಂಡೆ ಎಸ್ ಐ ಗೋಪಾಲ್ ರೆಡ್ಡಿ ಹಾಗೂ ಇನ್ಸ್ ಪೆಕ್ಟರ್ ಮಂಜುನಾಥ್ ನ್ನು ಅಮಾನತುಗೊಳಿಸಲಾಗಿದೆ.
ಹಿರೇನಸಗವಲ್ಲಿ ಗ್ರಾಮದಲ್ಲಿ ಸುಮಾರು 53 ಕಲ್ಲು ಕ್ವಾರಿಗಳು ಇವೆ. ಇಲ್ಲಿನ ವಿಸ್ತಾರವಾದ ಗುಡ್ಡವನ್ನು ಕಲ್ಲು ಕ್ವಾರಿಯಾಗಿ ಬದಲಿಸಲಾಗಿದ್ದು, ಇಡೀ ಬೆಟ್ಟವನ್ನೇ ಪುಡಿಗಟ್ಟಲಾಗಿದೆ. ಇಲ್ಲಿರುವ ಕಲ್ಲು ಕ್ವಾರಿಗಳ ಪೈಕಿ ಎಷ್ಟು ಕಲ್ಲು ಕ್ವಾರಿಗಳಿಗೆ ಅನುಮತಿ ಇದೆ ಎನ್ನುವ ಬಗ್ಗೆ ಇನ್ನು ಕೂಡ ಮಾಹಿತಿ ಲಭ್ಯವಾಗಿಲ್ಲ.