ಬಿಜೆಪಿ ಮುಖಂಡನನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಬೆಂಕಿ ಹಚ್ಚಿ ಭೀಕರ ಹತ್ಯೆ! - Mahanayaka

ಬಿಜೆಪಿ ಮುಖಂಡನನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಬೆಂಕಿ ಹಚ್ಚಿ ಭೀಕರ ಹತ್ಯೆ!

medak shreenivas prasad car
11/08/2021


Provided by

ಮೇದಕ್:ಬಿಜೆಪಿಯ ಮುಖಂಡನನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಮೇದಕ್ ಜಿಲ್ಲೆಯ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಶ್ರೀನಿವಾಸ್ ಪ್ರಸಾದ್ ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ.

 

ರಸ್ತೆಯಿಂದ ಸ್ವಲ್ಪ ದೂರದ ನಿರ್ಜನ ಪ್ರದೇಶದಲ್ಲಿ ಸುಟ್ಟುಹೋಗಿದ್ದ ಕಾರನ್ನು ಪರಿಶೀಲಿಸಿದಾಗ ಅದರ ಡಿಕ್ಕಿಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಶವ ಪತ್ತೆಯಾಗಿದೆ. ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಶ್ರೀನಿವಾಸ್ ಪ್ರಸಾದ್ ಅವರನ್ನು ಕೊಲೆ ಮಾಡಿ ನಂತರ ಕಾರಿನ ಡಿಕ್ಕಿಯಲ್ಲಿ ಇಡಲಾಗಿತ್ತೋ ಅಥವಾ ಜೀವಂತವಾಗಿ ಕಾರಿನ ಡಿಕ್ಕಿಯಲ್ಲಿ ಹಾಕಿ ಸುಡಲಾಗಿದೆಯೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಘಟನೆಯ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿ ಬಂದಿವೆ.

 

ಶವವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೇದಕ್ ಜಿಲ್ಲಾ ಎಸ್ಪಿ ಚಂದನ್ ದೀಪ್ತಿ ತಿಳಿಸಿದ್ದಾರೆ.

 

ಇನ್ನಷ್ಟು ಸುದ್ದಿಗಳು…

ಭಾರೀ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿದ 40 ಪ್ರಯಾಣಿಕರಿದ್ದ ಬಸ್!

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ದಿಢೀರ್ ಬೆಳವಣಿಗೆ: ರಾಜೀನಾಮೆಗೆ ಮುಂದಾದ ಸಚಿವ ಆನಂದ್ ಸಿಂಗ್?

ಉಗ್ರರ ಜೊತೆಗೆ ನಂಟು ವಿಚಾರ: ವಿ ಎಚ್ ಪಿ, ಬಜರಂಗದಳದಿಂದ ಬಿ.ಎಂ.ಬಾಷಾ ಮನೆಗೆ ಮುತ್ತಿಗೆ!

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಇತ್ತೀಚಿನ ಸುದ್ದಿ