ಬಿಜೆಪಿ ಮುಖಂಡರಿಂದ ಅಯೋಧ್ಯೆ ಸುತ್ತಲಿನ ಭೂಮಿ ಲೂಟಿ: ಪ್ರಿಯಾಂಕಾ ಗಾಂಧಿ ಆರೋಪ - Mahanayaka

ಬಿಜೆಪಿ ಮುಖಂಡರಿಂದ ಅಯೋಧ್ಯೆ ಸುತ್ತಲಿನ ಭೂಮಿ ಲೂಟಿ: ಪ್ರಿಯಾಂಕಾ ಗಾಂಧಿ ಆರೋಪ

priyanka gandhi
23/12/2021

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ಸುತ್ತಲಿನ ಭೂಮಿಯನ್ನು ಲೂಟಿ ಮಾಡಲಾಗಿದೆ. ಈ ಲೂಟಿಯಲ್ಲಿ ಬಿಜೆಪಿ ಮುಖಂಡರು, ಅಧಿಕಾರಿಗಳು, ಟ್ರಸ್ಟ್ ನವರು ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಈ ವಿಷಯವಾಗಿ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಜನರ ನಂಬಿಕೆಗೆ ಧಕ್ಕೆ ತರಲಾಗಿದೆ. ಕಡಿಮೆ ಬೆಲೆ ಬಾಳುವ ಜಮೀನನ್ನು ಅತಿ ಹೆಚ್ಚಿನ ಹಣಕ್ಕೆ ಟ್ರಸ್ಟ್ ಗೆ ನೀಡಲಾಗಿದೆ. ಅಂದರೆ ದೇಣಿಗೆ ಕಾಣಿಕೆ ಹಣದಲ್ಲಿ ಅವ್ಯವಹಾರ ನಡೆದಿದೆ ಎಂದರು.

ದೇಶದ ಪ್ರತಿಯೊಂದು ಮನೆಯವರು ರಾಮಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡಿದ್ದಾರೆ. ಮನೆ ಮನೆಗೆ ತೆರಳಿ ಈ ಬಗ್ಗೆ ಪ್ರಚಾರ ನಡೆಸಲಾಯಿತು. ಬಡ ಕುಟುಂಬಗಳು ಮತ್ತು ಮಹಿಳೆಯರು ತಮ್ಮ ಉಳಿತಾಯದಿಂದ ದೇಣಿಗೆ ನೀಡಿದ್ದಾರೆ. ಇದು ಭಕ್ತಿಯ ವಿಷಯವಾಗಿದ್ದು, ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಖರೀದಿಸಲು ಸಾಧ್ಯವಾಗದ ದಲಿತರ ಜಮೀನನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಆಪಾದಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡಿ.31ಕ್ಕೆ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಕರೆ

ಸ್ವದೇಶಿ ನಿರ್ಮಿತ ‘ಪ್ರಳಯ್’ ಕ್ಷಿಪಣಿ ಮೊದಲ ಪರೀಕ್ಷೆ ಯಶಸ್ವಿ

ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

ಬಿಜೆಪಿಯವರು ಸಂಖ್ಯಾಬಲ ಇದ್ದರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ: ಡಿ.ಕೆ.ಶಿವಕುಮಾರ್

ದೇಶದಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳ: ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ

ಮತಾಂತರ ನಿಷೇಧ ಕಾಯ್ದೆಯ ನಡುವೆಯೇ ಶುರುವಾಯ್ತು ಧರ್ಮಾಂಧರ ಉಪಟಳ: 160 ವರ್ಷ ಹಳೆಯ ಚರ್ಚ್ ಧ್ವಂಸ

ಇತ್ತೀಚಿನ ಸುದ್ದಿ