ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ - Mahanayaka
11:43 PM Monday 16 - September 2024

ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ

d k shivakumar
07/10/2021

ಬೆಂಗಳೂರು: ಬಿಜೆಪಿ ನಾಯಕರು ಕಾರಿನಲ್ಲಿ ಬರುತ್ತಿರುವಾಗ ಸಾರ್ವಜನಿಕರು ಎಚ್ಚರವಾಗಿರಬೇಕು. ನಿಮ್ಮ ಫೋನ್ ಕ್ಯಾಮರಾ ಆನ್ ಆಗಿಯೇ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದು, ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಅವರು ಈ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಸಾರ್ವಜನಿಕರಲ್ಲೊಂದು ಮನವಿ, ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹಾದು ಹೋಗುವ ಸಂದರ್ಭದಲ್ಲಿ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಹೀಗಿದ್ದಾಗ ಮುಂದೆ ನಿಮ್ಮ ವಿಡಿಯೋ ಮಹತ್ವದ ಸಾಕ್ಷ್ಯವಾಗಲಿದೆ. ಇದು ನೀವು ದೇಶಕ್ಕೆ ಕೊಡುವ ಉತ್ತಮ ಉಡುಗೊರೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರ ಎಂಬಲ್ಲಿ ರೈತರ ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನೇ ಚಾಲನೆ ಮಾಡುತ್ತಿದ್ದ ಕಾರನ್ನು ರೈತರ ಮೇಲೆ ಹತ್ತಿಸಲಾಗಿದೆ. ಆದರೆ, ತನ್ನ ಮಗ ಕಾರಿನಲ್ಲಿ ಇರಲೇ ಇಲ್ಲ ಎಂದು ಮಿಶ್ರಾ ವಾದಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸಾರ್ವಜನಿಕರು ಬಿಜೆಪಿ ನಾಯಕರ ಕಾರು ಬರುವಾಗ ಕ್ಯಾಮಾರ ಆನ್ ಮಾಡಿಕೊಳ್ಳಿ, ಯಾವಾಗ ಯಾರ ಮೇಲೆ ಕಾರು ಹರಿಸುತ್ತಾರೆ ಗೊತ್ತಿಲ್ಲ ಎಂಬ ಹೇಳಿಕೆಯನ್ನು  ಶಿವಕುಮಾರ್ ನೀಡಿದ್ದು, ವಿನೂತನವಾಗಿ ಲಖೀಂಪುರ ಘಟನೆಯನ್ನು ಖಂಡಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ

ಯೋಗ ಶಿಕ್ಷಕನಿಂದ ಯುವತಿಯ ಅತ್ಯಾಚಾರ: ಯೋಗದ ಹೆಸರಿನಲ್ಲಿ ಶಿಕ್ಷಕನ ಕಾಮಲೀಲೆ ಬಯಲು

RSS ಶಿಕ್ಷಣ ನೀಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು | ಬಿಜೆಪಿಗರಿಗೆ ಕುಮಾರಸ್ವಾಮಿ ತಿರುಗೇಟು

ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ

ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು

ಕಾರ್ಮಿಕರ ಮೇಲೆ ಗುಂಡು ಹಾರಾಟ ಪ್ರಕರಣ ದಿಕ್ಕು ತಪ್ಪದ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿ | ಡಿವೈಎಫ್ ಐ ಆಗ್ರಹ

ಇತ್ತೀಚಿನ ಸುದ್ದಿ