ಬಿಜೆಪಿ ಪಕ್ಷದ ಆಡಳಿತಕ್ಕೆ ಗ್ರಹಣ ಹಿಡಿದಿದೆ: ಹಿಂದೂ ಮಹಾಸಭಾ ಕಿಡಿ - Mahanayaka
11:39 PM Wednesday 5 - February 2025

ಬಿಜೆಪಿ ಪಕ್ಷದ ಆಡಳಿತಕ್ಕೆ ಗ್ರಹಣ ಹಿಡಿದಿದೆ: ಹಿಂದೂ ಮಹಾಸಭಾ ಕಿಡಿ

hindu maha sabha
18/01/2023

ಇವರು ದೇಶವನ್ನು ಯಾವ ದಿಕ್ಕಿನಲ್ಲಿ ಒಯ್ಯಲಿದ್ದರೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮೀಸಲಾತಿ ದೇಶದ ಹಾಗೂ ಧರ್ಮದ ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ಅಧಿಕಾರದ ಮೋಹ, ಧರ್ಮ ವಿರೋಧಿ ಕಾರ್ಯ ಮಾಡುವ ಮೂಲಕ ಹಿಂದುತ್ವಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಕಿಡಿಕಾರಿದ್ದಾರೆ.

ಇಂದು ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದ್ರೆ, ಬಿಜೆಪಿ ಜಾತಿಯ ಹೆಸರಿನಲ್ಲಿ ಧ್ವಂಸ ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಈ ಎರಡು ಪಕ್ಷಗಳು ಜನರ ಮಧ್ಯೆ ದ್ವೇಷವನ್ನು ತುಂಬುತ್ತವೆ. ಇದೇ ರೀತಿ ಮುಂದುವರಿದರೆ ಅವಕಾಶ ವಂಚಿತ ಯುವಜನತೆಯಿಂದ ಆಂತರಿಕ ಸಂಘರ್ಷಕ್ಕೆ ಕಾರಣವಾಗಬಹುದು. ಮೇಲು ಜಾತಿ ಎಂಬ ಕಾರಣ ಅವಕಾಶ ವಂಚಿರಾಗುವುದು ಯಾವ ನ್ಯಾಯ?  ಎಂದು ಅವರು ಪ್ರಶ್ನಿಸಿದರು.

ನಮ್ಮ ಮೂಲ ಸಂವಿಧಾನದಲ್ಲಿ ಮೀಸಲಾತಿಯನ್ನು ಎಪ್ಪತ್ತೈದು ವರ್ಷಗಳ ಕಾಲ ಮುಂದುವರಿಸಲು ಹಾಗೂ ಧರ್ಮದ ಆಧಾರದಲ್ಲಿ ಮೀಸಲಾತಿ ಅಥವಾ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಅವಕಾಶ ಇದೆಯೇ..?  ಅಧಿಕಾರ ಲಾಭ ಪಡೆಯಲು ದೇಶವನ್ನು ದುರ್ಬಲಗೊಳಿಸುವುದು ಯಾವ ನ್ಯಾಯ? ಮೀಸಲಾತಿಯನ್ನು ಮುಂದುವರಿಸುವ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದ ಅವರು, ನಾವು ಇನ್ನೂ ಅಭಿವೃದ್ಧಿ, ಹಾಗೂ ವಿದ್ಯಾವಂತರಾಗಿಲ್ಲ. ಹಾಗಾದರೆ ನಮ್ಮ ದೇಶ ಅಭಿವೃದ್ಧಿ ಹಾಗೂ ವಿದ್ಯಾವಂತರನ್ನು ಹೊಂದಿದ ದೇಶ ಎಂದು ವಂಚಿಸುವ ಈ ಎರಡು ಪ್ರಮುಖ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ