ಬಿಜೆಪಿ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ :ವಿಜಯೇಂದ್ರಗೆ ನಿರಾಸೆ - Mahanayaka

ಬಿಜೆಪಿ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ :ವಿಜಯೇಂದ್ರಗೆ ನಿರಾಸೆ

b s vejayendran
24/05/2022

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರಿಲ್ಲದಿರುವು ಅಚ್ಚರಿಗೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಪರಿಷತ್ ಅಭ್ಯರ್ಥಿಗಳಾಗಿ ಲಿಂಗಾಯತ ಕೋಟಾದಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಧಾರವಾಡದ ಲಿಂಗರಾಜು ಪಾಟೀಲ್, ಹೇಮಲತಾ ನಾಯಕ್, ದಲಿತ ಕೋಟಾದಲ್ಲಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಒಬಿಸಿ ಕೋಟಾದಡಿ ಕೇಶವ ಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಲಾಗಿದೆ.

ಇನ್ನು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ಪರಿಷತ್ ಟಿಕೆಟ್ ಪಡೆದು ಎಂಎಲ್ ಸಿಯಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ವಿಜಯೇಂದ್ರಗೆ ನಿರಾಸೆಯಾಗಿದೆ.

ವಿಧಾನಪರಿಷತ್ ಚುನಾವಣೆಗೆ ಬಿ.ವೈ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಮಿಸ್ ಆಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು ಹೈಕಮಾಂಡ್‍ಗೆ ವಿಜಯೇಂದ್ರ ಹೆಸರೂ ಶಿಫಾರಸು ಮಾಡಲಾಗಿತ್ತು.ಆದರೆ ವಿಜಯೇಂದ್ರಗೆ ಬೇರೆ ಬೇರೆ ಅವಕಾಶಗಳು ಇರುವುದರಿಂದ ವಿಜಯೇಂದ್ರಗೆ ಟಿಕೆಟ್ ಮಿಸ್ ಆಗಿದೆ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಳೆಯ ದ್ವೇಷ: ಉಳ್ಳಾಲದಲ್ಲಿ ಯುವಕನಿಗೆ  ತಂಡದಿಂದ ಚೂರಿ ಇರಿತ

ವಿಸ್ಮಯ ಪ್ರಕರಣ: ಕಿರಣ್ ಕುಮಾರ್ ಗೆ 10 ವರ್ಷ ಜೈಲು | 12 ಲಕ್ಷ ದಂಡ

ಶೂಟಿಂಗ್ ವೇಳೆ ನದಿಗೆ ಬಿದ್ದ ಕಾರು: ನಟಿ ಸಮಂತಾ, ವಿಜಯದೇವರಕೊಂಡ ಇದ್ದ ಕಾರು

ಜೂನ್ 1 ರಿಂದ ಶಾಲಾ ಮಕ್ಕಳಿಗೆ  ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆ

ಬ್ರಿಟಿಷರು ಟಿಪ್ಪುವಿನ ಬಗ್ಗೆ ಬರೆದ ಪುಸ್ತಕಗಳನ್ನು ತೆಗೆದು ಬಿಜೆಪಿಯವರು ಓದಲಿ: ಕಾಂಗ್ರೆಸ್

 

 

ಇತ್ತೀಚಿನ ಸುದ್ದಿ