ಬಿಜೆಪಿ ರೌಡಿ ರಾಜಕೀಯ: ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ
ಬಿಜೆಪಿಗೆ ರೌಡಿಶೀಟರ್ ಗಳು ಸೇರ್ಪಡೆಗೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಬಿಜೆಪಿಗೆ ಶೋಭೆ ತರುವ ವಿಚಾರ ಅಲ್ಲ ಎಂದಿದ್ದಾರೆ.
ರೌಡಿಗಳನ್ನು, ಗೂಂಡಾಗಳನ್ನು, ದುಡ್ಡಿದ್ದವರನ್ನು ಒಳಗಡೆ ಸೇರಿಸಿಕೊಳ್ತಿದ್ದೀರಿ. ತ್ಯಾಗ, ಬಲಿದಾನ, ಶ್ರಮವಹಿಸಿದಂತಹ ಹಿಂದೂ ಪ್ರಖರ ಕಾರ್ಯಕರ್ತರು, ನಿಮಗೆ ಕಾಣ್ತಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದ ಅಧ್ಯಕ್ಷರು ಪೂಜ್ಯ ಸ್ವಾಮೀಜಿಯವರು, ಇವತ್ತುರಾಜಕೀಯ ಪ್ರವೇಶ ಮಾಡಬೇಕು ಅನ್ನೋ ನಿರ್ಧಾರ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ಕೂಡ ನಾನು ರಾಜಕೀಯ ಪ್ರವೇಶ ಮಾಡಬೇಕು ಎಂದು ಕೊಂಡಿದ್ದೇನೆ. ನಾವು ನಿಮಗೆ ಕಾಣುವುದಿಲ್ಲ, ರೌಡಿಗಳು, ಗೂಂಡಾಗಳು ಕಾಣುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೌಡಿಗಳ ಮೂಲಕ ನೀವು ಗೆಲ್ಲೋಕೆ ಆಗುವುದಿಲ್ಲ. ಇಡೀ ಸಮಾಜದ ಸ್ವಾಸ್ಥ್ಯವನ್ನು ನೈತಿಕತೆಯನ್ನು ಕೆಡಿಸುವಂತಹ ಪ್ರಕ್ರಿಯೆ ಮಾಡುತ್ತಿರುವರನ್ನು ಸೇರಿಸುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka