ಬಿಜೆಪಿ, ಆರ್ ಎಸ್ ಎಸ್ ನ ಕಲ್ಪನೆ ಒಂದೇ ಆಗಿದೆ: ರಾಹುಲ್ ಗಾಂಧಿ
ಬಿಜೆಪಿಯವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡಲ್ಲ. ತಮ್ಮ ವೈಫಲ್ಯಗಳಿಗೆ ಯಾವಾಗಲೂ ಅವರು ಬೇರೆಯವರನ್ನು ದೂರುತ್ತಾರೆ. ನಾವು ಎದುರಿಸುತ್ತಿರುವ ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ.
ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ ಎಂದು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಜಾವಿಟ್ಸ್ ಸೆಂಟರ್‌ನಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು.
ಅವರು (ಪ್ರಧಾನಿ ನರೇಂದ್ರ ಮೋದಿ) ಭಾರತವೆಂಬ ಕಾರನ್ನು ಹಿಂಬದಿಯ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಈ ಕಾರು ಅಪಘಾತಗೊಂಡು ನಿಂತಾಗ ಅದು ಏಕೆ ಮುಂದಕ್ಕೆ ಚಲಿಸುತ್ತಿಲ್ಲ ಎಂಬುದರ ಬಗ್ಗೆ ಅವರಿಗೆ ಅರ್ಥವಾಗುತ್ತಿಲ್ಲ. ಬಿಜೆಪಿ ಹಾಗೂ ಆರೆಸ್ಸೆಸ್ ನ ಕಲ್ಪನೆ ಒಂದೇ ಆಗಿದೆ.
ನೀವು ಮಂತ್ರಿಗಳ ಮಾತುಗಳನ್ನು ಕೇಳುತ್ತೀರಿ. ನೀವು ಪ್ರಧಾನಿಯ ಮಾತುಗಳನ್ನು ಕೇಳುತ್ತೀರಿ. ಅವರು ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ಕೇಳುವುದಿಲ್ಲ, ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw