“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ” - Mahanayaka
5:29 PM Wednesday 5 - February 2025

“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ”

madiga
14/08/2021

ದೇವನಹಳ್ಳಿ: ಹಿಂದಿನಿಂದಲೂ ನಮ್ಮ ಸಮುದಾಯ ಸಾಕಷ್ಟು ರೀತಿಯಲ್ಲಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಇಲ್ಲಿಯವರೆಗೆ ಈ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವುದರಲ್ಲಿ ಸರ್ಕಾರವು ಮೀನಾ ಮೇಷ ಮಾಡುತ್ತಲೇ ಇವೆ.  ಈಗಿನ ಆಡಳಿತ ಸರ್ಕಾರ  ಇದನ್ನು ಆಯೋಗವನ್ನು ಜಾರಿಗೆ ತರುವುದು ಎಂದು ಬಹಳಷ್ಟು ನಂಬಿಕೆ ಇದೆ ಎಂದು ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಹೇಳಿದರು.

ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ಸಂಘಟನೆಯ ಒಕ್ಕೂಟದವರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು,  ನೂತನ ಕೇಂದ್ರ ರಾಜ್ಯ ಸಚಿವರಾಗಿ ಆಯ್ಕೆಯಾಗಿರುವ ಎ.ನಾರಾಯಣಸ್ವಾಮಿ ಅವರನ್ನು ನಮ್ಮ ಸಮಾಜದ ಎಲ್ಲಾ ಮುಖಂಡರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ತಿಂಗಳು 16ನೇ ತಾರೀಕು ಬರಮಾಡಿಕೊಂಡು ಸಾದಹಳ್ಳಿ ಟೋಲ್‌ಬಳಿ ಅದ್ದೂರಿ ಸ್ವಾಗತ ಕೋರಲಿದ್ದೇವೆ. ಬಳಿಕ ಅವರಿಗೆ ಸದಾಶಿವ ಆಯೋಗದ ವಿಚಾರವಾಗಿ ಮನವಿ ಮಾಡಲಾಗುವುದು. ಅವರಾದರು ಸದನದಲ್ಲಿ ಈ ವಿಚಾರವನ್ನು ಮುಂದಿಟ್ಟು ನಮಗೆ ಈ ಸದಾಶಿವ ಆಯೋಗವನ್ನು ಜಾರಿಗೊಳಿಸುವರು ಎಂದು ನಂಬಿದ್ದೇವೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಳೆದ ಬಾರಿ ಕೇಂದ್ರ ಸರಕಾರದ ಸಂಪುಟ ವಿಸ್ತರಣೆ ಆದ ನಂತರ ದಲಿತರಿಗೆ 12 ಜನರಿಗೆ 8 ಜನರಿಗೆ ಎಸ್‌ ಟಿಗಳಿಗೆ ಸಚಿವ ಸ್ಥಾನ ನೀಡಿದೆ. ಬಿಜೆಪಿಯ ಮೇಲೆ ಎಲ್ಲೋ ಒಂದು ಕಡೆ ದಲಿತ ವಿರೋದಿ ಎಂಬ ಅಪವಾದವಿತ್ತು. ಈಗಿನ ಬೆಳವಣಿಗೆಯನ್ನು ನೋಡುತ್ತಿದ್ದರೆ, ಬಿಜೆಪಿಯು ದಲಿತರ ಪರವಾಗಿದೆ ಎಂದು ನಮಗೆಲ್ಲರಿಗೂ ಕಂಡುಬರುತ್ತಿದೆ. ಎ.ನಾರಾಯಣಸ್ವಾಮಿ ಅವರು ಮೊದಲ ಬಾರಿಗೆ ಚಿತ್ರದುರ್ಗ ಎಂಪಿ ಆಗಿದ್ದಾರೆ. ಅವರನ್ನು ಗುರುತಿಸಿ ಕೇಂದ್ರದ ರಾಜ್ಯ ಸಚಿವ ಸ್ಥಾನ ನೀಡಿರುವುದು ಸಂತಸದ ವಿಷಯವಾಗಿದೆ. ಕೇಂದ್ರದ ಪ್ರಧಾನಿ ನರೇಂದ್ರಮೋದಿ ಅವರಿಗೆ ನಮ್ಮ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ವೇಳೆಯಲ್ಲಿ ಕರ್ನಾಟಕ ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಜಿ.ಮಾರಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮುನಿರಾಜು, ತಾಲೂಕು ಅಧ್ಯಕ್ಷ ಕದಿರಪ್ಪ, ಡಿಎಸ್‌ ಎಸ್‌ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಆದಿ ಜಾಂಭವಂತ ಟ್ರಸ್ಟ್ ಕಾರ್ಯದರ್ಶಿ ತಿರುಮಳೇಶ್, ತಾಲೂಕು ಮಾದಿಗ ದಂಡೋರ ಪ್ರಧಾನ ಕಾರ್ಯದರ್ಶಿ ಮುನಿರಾಜು, ದೇವನಹಳ್ಳಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಎನ್.ನಾರಾಯಣಸ್ವಾಮಿ, ಸಮಾಜ ದಲಿತ ಮಹಾಸಭಾದ ಅಧ್ಯಕ್ಷ ವೀರಪ್ಪ, ಮುಖಂಡರಾದ ಆನಂದ್, ವೆಂಕಟಗಿರಿಕೋಟೆ ಮೂರ್ತಿ, ಗ್ರಾಪಂ ಸದಸ್ಯ ಮಾರಪ್ಪ, ಕಲಾತಂಡದ ಜಿಲ್ಲಾಧ್ಯಕ್ಷ ಎಂ.ಮುನಿರಾಜು, ಬಿಜೆಪಿಯ ಟೌನ್ ಘಟಕ ಅಧ್ಯಕ್ಷ ವಿಜಯಪುರ ರಾಘವ, ಪ್ರಭು, ಸತೀಶ್, ಮಹೇಶ್, ಮತ್ತಿತರರು ಇದ್ದರು.

ಇನ್ನಷ್ಟು ಸುದ್ದಿಗಳು…

ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ

ಭೇಟಿಗೆ ಅವಕಾಶ ನೀಡಿರಲಿಲ್ಲ ಅದಕ್ಕಾಗಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದೆವು ಎಂದ ಆರೋಪಿಗಳು

ಮನೆಯೊಳಗೆ ಒಂಟಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ!

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ!

ಇತ್ತೀಚಿನ ಸುದ್ದಿ