ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ | ಛಲವಾದಿ ನಾರಾಯಣಸ್ವಾಮಿ - Mahanayaka
2:06 PM Wednesday 5 - February 2025

ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ | ಛಲವಾದಿ ನಾರಾಯಣಸ್ವಾಮಿ

narayanaswamy
29/11/2021

ಬೆಂಗಳೂರು: ಬಿಜೆಪಿ ಸಂವಿಧಾನ ವಿರೋಧಿ ಅಲ್ಲ ಎಂದು ನಾನು ನಿರೂಪಿಸುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದು, ಸಂವಿಧಾನ ದಿನಾಚರಣೆ ಆಚರಿಸಿದ ಬಿಜೆಪಿ ಸಂವಿಧಾನ ವಿರೋಧಿಯಾ?  ಇಲ್ಲ ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಸಂವಿಧಾನ ವಿರೋಧಿಯಾ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಅವರು ಹೇಳಿದರು.

ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು,  ಇಂದು ದೇಶದಲ್ಲಿ ಸಂವಿಧಾನದ ವಿಚಾರ ಚರ್ಚೆಯಾಗುತ್ತಿದೆ. ಸಂವಿಧಾನ ಹಾಗೂ ಸಂವಿಧಾನ ಬರೆದ ಅಂಬೇಡ್ಕರ್ ಅವರಿಗೆ ಗೌರವ ನೀಡಬೇಕು ಎನ್ನುವ ನಿಟ್ಟಿನಲ್ಲಿ  ಸಂವಿಧಾನ ದಿನಾಚರಣೆ ಆಚರಿಸಿದ್ದು ಮೋದಿಯವರು. 26ರಂದು ಮೋದಿಜಿ ಸಂವಿಧಾನ ದಿನಾಚರಣೆ ಆಚರಸಿದ ವೇಳೆ ಕಾಂಗ್ರೆಸ್ ಸೇರಿದಂತೆ 16 ಪಕ್ಷಗಳು ಅದನ್ನು ಬಹಿಷ್ಕರಿಸಿದವು. ಹಾಗಿದ್ದರೆ ಸಂವಿಧಾನ ವಿರೋಧಿಗಳು ಯಾರು ಎಂದು ಅವರು ಪ್ರಶ್ನಿಸಿದರು.

ನಾನು ಪ್ರಧಾನಿಯಾಗಿರುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಎಂದು ಪ್ರಧಾನಿ ಮೋದಿ ಬಹಿರಂಗವಾಗಿ ಹೇಳಿಕೊಂಡರು. ಆದರೆ, ಕಾಂಗ್ರೆಸ್ ನ ಯಾವ ನಾಯಕನೂ ಈ ಮಾತನ್ನು ಹೇಳಿಲ್ಲ.  ಅನಿಲ್ ಲಾಡ್ ಸಂವಿಧಾನವನ್ನು ಅಪಮಾನಿಸಿದ್ದಾರೆ. ದೇಶಕ್ಕೆ ಸಂವಿಧಾನ ಕೊಟ್ಟಿರೋದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಆ ಗಾಂಧಿ, ರಾಹುಲ್ ಗಾಂಧಿ ಎಂದಿದ್ದಾರೆ. ಸಿದ್ದರಾಮಯ್ಯನವರೇ ಹೇಳಿ ದೇಶಕ್ಕೆ ಸಂವಿಧಾನ ನೀಡಿದ್ದು ಯಾರು ಅಂತ ಎಂದು ನಾರಾಯಣಸ್ವಾಮಿ ತರಾಟೆಗೆತ್ತಿಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ಸ್ವಂತ ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇದೆಯಾ? | ಸಚಿವ ಸುಧಾಕರ್ ನೀಡಿದ ಖಡಕ್ ಎಚ್ಚರಿಕೆ ಏನು?

ಶಾಕ್ ನೀಡಿದ ಜಿಯೋ: ಏರ್ಟೆಲ್ ವೊಡಾಫೋನ್ ಬಳಿಕ ಜಿಯೋ ರೀಚಾರ್ಜ್ ದರ ಏರಿಕೆ

ಒಮಿಕ್ರಾನ್  ಭೀತಿಯ ನಡುವೆಯೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರಿಗೆ ಕೊವಿಡ್ ದೃಢ!

ಸರಿಗಮಪ ವೇದಿಕೆಗೆ ಬೇಗ ಬಂದು ಸೇರಿಕೊಳ್ಳುತ್ತೇನೆ | ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ ಹಂಸಲೇಖ

ಇತ್ತೀಚಿನ ಸುದ್ದಿ