ಬಿಜೆಪಿ ಸರ್ಕಾರದ ಸ್ಥಿತಿ ‘ಒಲ್ಲದ ಸಂಸಾರ’ದಂತಿದೆ, ಯಾವಾಗ ಬೇಕಾದರೂ ಡಿವೋರ್ಸ್ ಆಗಬಹುದು | ಕಾಂಗ್ರೆಸ್
ಬೆಂಗಳೂರು: ರಾಜ್ಯ ಸರ್ಕಾರವು ಇನ್ನೂ ಟೇಕಾಫ್ ಆಗಿಲ್ಲ. ಅದು ಮುಂದೆ ಆಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಹೇಳಿದ್ದು, ಸರ್ಕಾರದ ಸ್ಥಿತಿ ಒಲ್ಲದ ಸಂಸಾರದಂತಿದೆ. ಯಾವಾಗ ಬೇಕಾದರೂ ಡಿವೋರ್ಸ್ ಆಗಬಹುದು ಎಂದು ರಾಜ್ಯ ಸರ್ಕಾರದ ಕಾಲೆಳೆದಿದೆ.
ರಾಜ್ಯ ಸರ್ಕಾರದ ನೂತನ ಸಚಿವರ ವರ್ತನೆ ಕುರಿತ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರ ಟೇಕಾಫ್ ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಕಚೇರಿಯಿಂದ ವಿಮುಖರಾದ ಸಚಿವರ ಧೋರಣೆಯೇ ಹೇಳುತ್ತಿದೆ ಎಂದು ಹೇಳಿದೆ.
ಕಚೇರಿಗೆ ತೆರಳಿ ತಮ್ಮ ನೂತನ ಖಾತೆಯ ವಿವರಗಳ ಪಡೆದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಆಗಬೇಕಾದ ಕೆಲಸಗಳತ್ತ ಗಮನಿಸಬೇಕು. ಆದರೆ ಬಿಜೆಪಿ ಸರ್ಕಾರದ ಸ್ಥಿತಿ ‘ಒಲ್ಲದ ಸಂಸಾರ’ದಂತಿದೆ! ಯಾವಾಗ ಬೇಕಾದರೂ ‘ಡಿವೋರ್ಸ್’ ಆಗಬಹುದು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿಯ ಸಚಿವರೆಲ್ಲರೂ ಒಲ್ಲದ ಮನಸ್ಸಿನಿಂದ ಬಲವಂತವಾಗಿ ಕಚೇರಿಯಲ್ಲಿ ಕೂರಿಸಲ್ಪಟ್ಟವರೇ. ಸಚಿವರು ಒಲ್ಲದ ಖಾತೆಯಲ್ಲಿ ಶ್ರದ್ಧೆ ಕಳೆದುಕೊಂಡು ಅಭಿವೃದ್ಧಿ ಕೆಲಸಗಳು ನಿಂತ ನೀರಾಗುವುದು ಖಚಿತ ಎಂದು ಕಾಂಗ್ರೆಸ್ ಟೀಕಿಸಿದೆ.
ಇನ್ನಷ್ಟು ಸುದ್ದಿಗಳು…
ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ
ಪೊಲೀಸರನ್ನು ಕ್ಯಾರೇ ಮಾಡದೇ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರಾಜಕೀಯ ಜಾತ್ರೆ!
ದಂತ ವೈದ್ಯನ ಕೈಯಿಂದ ಜಾರಿದ ಸ್ಕ್ರೂ ವೃದ್ಧನ ಶ್ವಾಸಕೋಶ ಸೇರಿತು | ಮುಂದೆ ನಡೆದದ್ದೇನು ಗೊತ್ತಾ?
56ನೇ ವಯಸ್ಸಿನಲ್ಲಿ ಮತ್ತೆ ವಿವಾಹವಾದ ಬಹುಭಾಷಾ ನಟ ಪ್ರಕಾಶ್ ರೈ
ನಟಿಯರು ಡ್ರಗ್ಸ್ ಸೇವಿಸಿದ್ದು ದೃಡವಾಗಿದೆ, ಕೇಸ್ ಇನ್ನಷ್ಟು ಗಟ್ಟಿಯಾಗಿದೆ | ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
ಕಾಂಗ್ರೆಸ್ ಭಯೋತ್ಪಾದನೆಯ ಮನಸ್ಥಿತಿಗಳನ್ನು ಪ್ರೋತ್ಸಾಹಿಸುತ್ತದೆ | ಸಚಿವೆ ಶೋಭಾ ಕರಂದ್ಲಾಜೆ