ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಭಟನೆ | ಕಾರಣ ಏನು ಗೊತ್ತಾ?
ಬೆಂಗಳೂರು: ಮೂಡಿಗೆರೆ ತಾಲೂಕನ್ನು ಅತಿವೃಷ್ಠಿ ತಾಲೂಕುಗಳ ಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ಸಂಬಂಧ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಮೂಡಿಗೆರೆ ತಾಲೂಕಿಗೆ ಅತಿವೃಷ್ಠಿಯಿಂದ ಆಗಿರುವ ಹಾನಿಗೆ ಸಂಬಂಧಿಸಿದಂತೆ ಅನುದಾನದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಎಂ.ಪಿ.ಕುಮಾರ್ ಸ್ವಾಮಿ ಆರೋಪಿಸಿದ್ದು, ವಿಧಾನ ಸೌಧದ ಮುಂದಿನ ಗಾಂಧಿ ಪ್ರತಿಮೆಯ ಎದುರು ಬ್ಯಾನರ್ ಪ್ರದರ್ಶಿಸಿ ಅವರು ಪ್ರತಿಭಟಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನ್ನನ್ನು ಕರೆಸಿ ಸಚಿವ ಸ್ಥಾನ ನೀಡಲಾಗುವುದಿಲ್ಲ, ಆದರೆ ನಿಮ್ಮ ಬೆಂಬಲ ಸರ್ಕಾರಕ್ಕೆ ಬೇಕು ಎಂದು ಬೆಂಬಲ ಕೋರಿದರು. ಹಾಗೆಯೇ ನನ್ನ ಕ್ಷೇತ್ರ(ಮೂಡಿಗೆರೆ)ಕ್ಕೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವುದಾಗಿ ಹೇಳಿದರು. ಆದರೆ ಅತಿವೃಷ್ಠಿ ಪಟ್ಟಿಯಲ್ಲಿ ನಮ್ಮ ತಾಲೂಕನ್ನು ಕೈ ಬಿಟ್ಟಿರುವುದು ಬೇಸರ ತಂದಿದೆ ಎಂಧು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ ಹಾಗೂ ಮನೆ, ಜಮೀನು ಮತ್ತು ಬೆಳೆ ಹಾನಿ ಆದವರಿಗೆ ಪರಿಹಾರ ನೀಡಿ ಎಂದು ಬರೆಯಲಾದ ಬ್ಯಾನರ್ ನ್ನು ಅವರು ಪ್ರದರ್ಶಿಸಿದರು.
ಇನ್ನಷ್ಟು ಸುದ್ದಿಗಳು…
ಪೊಲೀಸರ ನಡುವೆಯೇ ಘರ್ಷಣೆ: ಹೆಡ್ ಕಾನ್ಸ್ ಟೇಬಲ್ ಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಕಾನ್ಸ್ ಟೇಬಲ್
ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಯಾರು? | ತಡ ರಾತ್ರಿ ನಡೆದ್ದದ್ದೇನು?
ಬಿಜೆಪಿ ಮುಖಂಡನನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಬೆಂಕಿ ಹಚ್ಚಿ ಭೀಕರ ಹತ್ಯೆ!
ನೀರಜ್ ಚೋಪ್ರಾರನ್ನು ಅನುಕರಿಸಿ ರೋಡಲ್ಲಿ ನಿಂತು ಈಟಿ ಎಸೆದ ರಾಖಿ ಸಾವಂತ್ | ಮುಂದೇನಾಯ್ತು?