ಬಿಜೆಪಿ ಶಾಸಕ, ಸಚಿವರಿಗೆ ‘ಮೊಟ್ಟೆ ದಾಳಿಯ ಭೀತಿ’: ಶುರುವಾಯ್ತಾ ಮೊಟ್ಟೆ ವಾರ್!?

ಕೊಡಗು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದ ಘಟನೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗುತ್ತಿದ್ದು, ಇದೀಗ ಬಿಜೆಪಿ ಶಾಸಕರು, ಸಚಿವರಿಗೆ ಮೊಟ್ಟೆ ಭೀತಿ ಆರಂಭವಾಗಿದೆ.
ವರದಿಗಳ ಪ್ರಕಾರ, ಶಾಸಕರ ಭವನಕ್ಕೆ ತೆರಳುವ ಜನರನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಯಾರಾದರೂ ಮೊಟ್ಟೆ ಕೊಂಡೊಯ್ಯುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೆ.ಜಿ ಬೊಪ್ಪಯ್ಯ, ಅಪ್ಪಚ್ಚು ರಂಜನ್ ಕಚೇರಿ ಬಳಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಬೆಂಗಳೂರಿನ ಶಾಸಕ ಭವನದಲ್ಲಿರುವ ಶಾಸಕ ಕೊಠಡಿಯ ಮುಖ್ಯದ್ವಾರದಲ್ಲಿ ಕಚೇರಿಗೆ ತೆರಳುವ ಜನರನ್ನು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆನ್ನಲಾಗಿದೆ.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಪೊಲೀಸರ ಸಮ್ಮುಖದಲ್ಲೇ ಮೊಟ್ಟೆ ಎಸೆದ ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಈ ಘಟನೆಯ ನಂತರ ಮಾತನಾಡಿದ್ದ ಸಿದ್ದರಾಮಯ್ಯ, ನಮ್ಮ ಕಾರ್ಯಕರ್ತರು ಬೀದಿಗಿಳಿದರೆ, ಸಿಎಂ, ಸಚಿವ, ಶಾಸಕರು ರಸ್ತೆಗಿಳಿಯಲು ಕಷ್ಟವಾಗಬಹುದು ಎಂಬ ಎಚ್ಚರಿಕೆ ನೀಡಿದ್ದರು.
ಮೊಟ್ಟೆ ದಾಳಿ ವಿಚಾರ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಬಿಜೆಪಿ, ಶಾಸಕರು ಹಾಗೂ ಸಚಿವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆಯ ಬಹುದು ಎಂಬ ಭೀತಿ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಶಾಸಕರ ಭವನದಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka