ಬಿಜೆಪಿ ಶಾಸಕಗೆ ಹೃದಯಾಘಾತ; ಆಸ್ಪತ್ರೆ ತಲುಪುವ ಮುನ್ನವೇ ನಿಧನ - Mahanayaka
7:53 PM Thursday 12 - December 2024

ಬಿಜೆಪಿ ಶಾಸಕಗೆ ಹೃದಯಾಘಾತ; ಆಸ್ಪತ್ರೆ ತಲುಪುವ ಮುನ್ನವೇ ನಿಧನ

devendra prathap singh
31/05/2021

ಉತ್ತರಪ್ರದೇಶ: ಉತ್ತರ ಪ್ರದೇಶದ ಬಿಜೆಪಿ ಶಾಸಕ ದೇವೇಂದ್ರ ಪ್ರತಾಪ್ ಸಿಂಗ್  ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

55 ವರ್ಷ ವಯಸ್ಸಿನ ದೇವೆಂದ್ರ ಪ್ರತಾಪ್ ಸಿಂಗಹ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಸಾವನಪ್ಪಿದ್ದಾರೆ.

ಅಮಾಪುರ ಕ್ಷೇತ್ರದಿಂದ ದೇವೇಂದ್ರ ಪ್ರತಾಪ್ ಸಿಂಗ್  ಅವರು ಮೂರು ಬಾರಿ ಆಯ್ಕೆಯಾಗಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರು ಸಾಲು ಸಾಲು ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ ಹಲವಾರು ಶಾಸಕರು ಕೊರೊನಾಕ್ಕೆ ಬಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ