ಚಾಮರಾಜನಗರದಲ್ಲಿ ಬರ ಅಧ್ಯಯನ ಆರಂಭಿಸಿದ ಬಿಜೆಪಿ!

chamarajanagara
06/11/2023

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಬಿಜೆಪಿ ಬರ ಅಧ್ಯಯನ ಆರಂಭಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ  ಮಾಜಿ ಸಚಿವ ಎನ್.ಮಹೇಶ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ವಿಜಯಶಂಕರ್, ಶಾಸಕ ಶ್ರೀವತ್ಸ, ಮಾಜಿ ಶಾಸಕ ನಿರಂಜನ್ ಸೇರಿದಂತೆ ಹಲವು ಮುಖಂಡರು ಬರ ಅಧ್ಯಯನ ನಡೆಸಿದರು.

ಜಿಲ್ಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಬರ ಅಧ್ಯಯನ ಆರಂಭಿಸಿದ ಬಿಜೆಪಿ ತಂಡ ಗುಂಡ್ಲುಪೇಟೆ ತಾಲೂಕಿನ ಕಿಳಲೀಪುರ, ಸೀಗೆವಾಡಿ, ಕೆರೆಹಳ್ಳಿ, ಮುಕ್ಕಡಹಳ್ಳಿ, ಮೂಡ್ನಾಕೂಡು ಚಾಮರಾಜನಗರದ ಬೇಡರಪುರ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದರು.

ಮಧ್ಯಾಹ್ನ 3‌:30ಕ್ಕೆ ಜಿಲ್ಲೆಯ ರೈತರ ಜತೆ ಬಿಜೆಪಿ ನಾಯಕರು ಸಂವಾದ ನಡೆಸಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version