ಒಡಿಶಾ ರೈಲು ದುರಂತ ಸಂತ್ರಸ್ತರಿಗೆ 2 ಸಾವಿರ ರೂ. ನೋಟಿನಲ್ಲಿ ಪರಿಹಾರ ವಿತರಣೆ: ಬಿಜೆಪಿ— ತೃಣಮೂಲ ಕಾಂಗ್ರೆಸ್ ನಡುವೆ ಜಟಾಪಟಿ
ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರದ ಸಚಿವರೊಬ್ಬರು 2 ಸಾವಿರ ರೂಪಾಯಿಗಳ ನೋಟುಗಳನ್ನು ವಿತರಿಸಿರುವುದು ಬಿಜೆಪಿ ಹಾಗೂ ಟಿಎಂಸಿ ನಾಯಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು, ಒಡಿಶಾದ ಬಾಲಸೋರ್ ನಲ್ಲಿ ರೈಲು ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡ ಬಂಗಾಳದ ದಕ್ಷಿಣ24 ಪರಗಣ ಜಿಲ್ಲೆಯ ಕುಟುಂಬವೊಂದಕ್ಕೆ ಪರಿಹಾರವಾಗಿ ನೀಡಿರುವ 2 ಸಾವಿರ ರೂಪಾಯಿಗಳ ನೋಟುಗಳ ಬಂಡಲ್ ಹಣ ವಿಡಿಯೋದಲ್ಲಿ ಕಂಡು ಬಂದಿದೆ. ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ಸಂತ್ರಸ್ತ ಕುಟುಂಬಗಳಿಗೆ 2 ಲಕ್ಷ ನೆರವು ನೀಡಿರುವುದನ್ನು ನಾನು ಶ್ಲಾಘಿಸುತ್ತೇನೆ. ಆದರೆ 2 ಸಾವಿರ ರೂಪಾಯಿ ನೋಟುಗಳ ಬಂಡಲ್ ನ ಮೂಲ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.
ಬ್ಯಾಂಕ್ ಗಳಲ್ಲಿ ಈಗಾಗಲೇ 2 ಸಾವಿರ ರೂಪಾಯಿ ನೋಟುಗಳ ವಿನಿಮಯ ನಡೆಯುತ್ತಿರುವಾಗ ಸಂತ್ರಸ್ತರ ಕುಟುಂಬಗಳಿಗೆ ಈ ನೋಟುಗಳನ್ನು ನೀಡುವುದು ಒಳ್ಳೆಯ ನಿರ್ಧಾರವೇ ಎಂದು ಮಜುಂದಾರ್ ಪ್ರಶ್ನಿಸಿದ್ದು, ಅಸಹಾಯಕ ಕುಟುಂಬಗಳಿಗೆ 2 ಸಾವಿರ ರೂಪಾಯಿಗಳ ನೋಟು ನೀಡಿ ಅವರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದಂತಾಗುವುದಿಲ್ಲವೇ? ಟಿಎಂಸಿ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಇದು ಒಂದು ಮಾರ್ಗವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಜುಂದಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್, 2 ಸಾವಿರ ರೂಪಾಯಿಗಳನ್ನು ನೀಡುವುದು ಕಾನೂನು ಬಾಹಿರವಲ್ಲ, ಯಾಕೆಂದರೆ 2 ಸಾವಿರ ರೂಪಾಯಿಯ ನೋಟುಗಳು ಇನ್ನೂ ಕಾನೂನು ಬದ್ಧವಾಗಿವೆ. ಮಜುಂದಾರ್ ಅವರ ಟ್ವೀಟ್ ಆಧಾರ ರಹಿತ ಎಂದಿದ್ದಾರೆ.
2 ಸಾವಿರ ರೂಪಾಯಿಯ ನೋಟು ಅಮಾನ್ಯವೇ? ಎಂದು ಪ್ರಶ್ನಿಸಿರುವ ಅವರು, ಇಂದು ಯಾರಿಗಾದರೂ 2 ಸಾವಿರ ರೂಪಾಯಿ ನೋಟು ನೀಡಿದರೆ, ಅದು ಅಕ್ರಮ ಅಥವಾ ಕಪ್ಪು ಹಣವಲ್ಲ ಎಂದು ಘೋಷ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw