ಮಾರ್ಚ್ 12ರಂದು ಉಡುಪಿ ಜಿಲ್ಲೆಗೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ
ಉಡುಪಿ: ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿ ವತಿಯಿಂದ 4 ರಥಯಾತ್ರೆ ಹೊರಡಲಿದ್ದು ಒಂದನೇ ರಥಯಾತ್ರೆಯೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಜೆ ಪಿ ನಡ್ಡ ಅವರಿಂದ ಮೈಸೂರಿನಲ್ಲಿ ಉದ್ಘಾಟನೆಗೊಂಡು ರಥಯಾತ್ರೆಯು ಮಾರ್ಚ್ 12ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ.
ಮಾರ್ಚ್ 12ರಂದು ವಿಜಯ ಸಂಕಲ್ಪ ರಥಯಾತ್ರೆಯು ಕಾರ್ಕಳದಿಂದ ಹೊರಟು 13ರಂದು ಕಾಪು ಮತ್ತು ಉಡುಪಿ, 14ರಂದು ಕುಂದಾಪುರ ಮತ್ತು ಬೈಂದೂರು ಮೂಲಕ ಶೃಂಗೇರಿಗೆ ತಲುಪಲಿದೆ ಎಂದು ವಿಜಯ ಸಂಕಲ್ಪ ರಥಯಾತ್ರೆಯ ರಾಜ್ಯ ಸಹ ಸಂಚಾಲಕ ಕಿಶೋರ್ ಕುಮಾರ್ ಕುಂದಾಪುರ್ ತಿಳಿಸಿದರು. ಈ ರಥಯಾತ್ರೆಯಲ್ಲಿ ರೋಡ್ ಶೋ ಮತ್ತು ಪ್ರಮುಖರೊಂದಿಗೆ ಸಂವಾದ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಜಯ ಸಂಕಲ್ಪ ರಥಯಾತ್ರೆಯ ಸಂಚಾಲಕ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಸಹ ಸಂಚಾಲಕರು ಅನಿತಾ ಶ್ರೀಧರ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾದ ಕೆ ರಾಘವೇಂದ್ರ ಕಿಣಿ, ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಕಾರ್ಕಳ ಮಂಡಲ ಅಧ್ಯಕ್ಷರಾದ ಮಹಾವೀರ್, ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಬೈಂದೂರು ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ, ಮಂಡಲಗಳ ವಿಜಯ ಸಂಕಲ್ಪ ರಥಯಾತ್ರೆ ಉಸ್ತುವಾರಿಗಳು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw