ದನ ಸಾಗಾಟದ ಪಿಕಪ್ ತಡೆದ ಬಿಜೆಪಿ ಕಾರ್ಯಕರ್ತರು: ಚಾಲಕ ಪರಾರಿ - Mahanayaka

ದನ ಸಾಗಾಟದ ಪಿಕಪ್ ತಡೆದ ಬಿಜೆಪಿ ಕಾರ್ಯಕರ್ತರು: ಚಾಲಕ ಪರಾರಿ

chikkamagaluru cow
28/06/2023

ಚಿಕ್ಕಮಗಳೂರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಪಿಕಪ್ ವಾಹನ ತಡೆದು ತಪಾಸಣೆ ನಡೆಸಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು‌ ಸಮೀಪದ ಹ್ಯಾರಂಬಿ‌ ಗ್ರಾಮದ ಬಳಿ ನಡೆದಿದೆ.

ವಾಹನ ತಡೆದ ವೇಳೆ ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪಿಕಪ್ ನಲ್ಲಿ 5 ಜಾನುವಾರುಗಳನ್ನು ಕಾಲು ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಬಾಳೆಹೊನ್ನೂರು‌ ಠಾಣೆಯ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ