ಮಂಗಳೂರಿನ ಸಂಘದ ಪ್ರಚಾರಕರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಓಡಿ ಹೋಗಿದ್ದವರು ಯಾರು? | ಕುಮಾರಸ್ವಾಮಿ ಪ್ರಶ್ನೆ - Mahanayaka
1:58 PM Thursday 12 - December 2024

ಮಂಗಳೂರಿನ ಸಂಘದ ಪ್ರಚಾರಕರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಓಡಿ ಹೋಗಿದ್ದವರು ಯಾರು? | ಕುಮಾರಸ್ವಾಮಿ ಪ್ರಶ್ನೆ

h d kumaraswamy
21/10/2021

ಸಿಂದಗಿ:  ತಮ್ಮ ವೈಯಕ್ತಿಕ ವಿಚಾರವನ್ನೆತ್ತಿಕೊಂಡು ಬೈಗಾಮಿ(ದ್ವಿಪತ್ನಿ) ಪದ ಬಳಕೆ ಮಾಡಿದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ(H.D.Kumaraswamy), ನಾನು ಏನು ಮಾಡಿದರೂ ಕದ್ದುಮುಚ್ಚಿ ಮಾಡಿಲ್ಲ. ಬಹಿರಂಗವಾಗಿ ಮಾಡಿದ್ದೇನೆ. ಆದರೆ, ಆರೆಸ್ಸೆಸ್(RSS) ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯವನ್ನು ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ  ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಂದಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕುಮಾರಸ್ವಾಮಿ, ಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಾನು RSS ಬಗ್ಗೆ ಎತ್ತಿರುವ ಪ್ರಶ್ನೆಗಳ ಬಗ್ಗೆ ಉತ್ತರ ನೀಡಲಿ. ಅದರ ಹೊರತಾಗಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದರೆ ನಾನು ಅವರೆಲ್ಲರ ವಿಚಾರಗಳನ್ನು ಮಾಧ್ಯಮಗಳ ಮುಂದೆ ಇಡಬೇಕಾಗುತ್ತದೆ. ಅವೆಲ್ಲವನ್ನೂ ನೀವು ನೋಡಿದರೆ ಅಸಹ್ಯಪಡುತ್ತೀರಿ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ನಾಯಕರದ್ದು ಬ್ರಹ್ಮಾಂಡ ಬಂಡವಾಳ ಇದೆ. ಹಿಂದೆ ಚಿಕ್ಕಮಗಳೂರಿನ ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿ ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ. ಈ ಆತ್ಮಹತ್ಯೆಗೆ ಕಾರಣನಾದವರು ಯಾರು? ಆ ನಾಯಕನ ಬಗ್ಗೆ ತಾಕತ್ತಿದ್ದರೆ ಬಿಜೆಪಿಯವರು ಮಾತನಾಡಲಿ. ಆ ಪಕ್ಷ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಸಂಘದ ಪ್ರಚಾರಕರೊಬ್ಬರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಕದ್ದು ಓಡಿ ಹೋಗಿದ್ದವರು ಯಾರು? ನೀವೇ ಹೇಳಿ. ಇಲ್ಲವಾದರೆ ಅದೆಲ್ಲವನ್ನೂ ನಾನೇ ಬಿಚ್ಚಿ ಇಡಬೇಕಾಗುತ್ತದೆ. ನಾನು ಪದೇ ಪದೆ ಹೇಳುತ್ತಿದ್ದೇನೆ. ನಾನು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಬಿಜೆಪಿಯವರು ಎಷ್ಟು ಮನೆಗಳನ್ನು ಹಾಳು ಮಾಡಿದ್ದಾರೆ ಎಂಬುದು ನನಗೆ ಮಾತ್ರವಲ್ಲ ಇಡೀ ನಾಡಿಗೇ ಗೊತ್ತಿದೆ. ಅದಕ್ಕೆ ಹೇಳುತ್ತಿದ್ದೇನೆ, ನನ್ನ ವಿಷಯಕ್ಕೆ ಬರಬೇಡಿ. ಸಾಧ್ಯವಾದರೆ ನಾನು RSS ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಕುಮಾರಸ್ವಾಮಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಐವಾನ್ ಡಿಸೋಜಾ ಮನೆಯಿಂದಲೇ ಮತಾಂತರ ಆರಂಭವಾಗಿದೆ | ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ

ಜಾನುವಾರುಗಳಿಗೆ ಆಸರೆಯಾಗಿದ್ದ ಸಬ್ ಇನ್ ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ

ವಿದ್ಯಾರ್ಥಿಯ ಜೊತೆಗಿನ ಒಡನಾಟದಿಂದ ಪ್ರಾಣ ಕಳೆದುಕೊಂಡ ಗೃಹಿಣಿ!

ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರದ್ದೇ ದೊಡ್ಡಪಾಲು | ಪ್ರಿಯಾಂಕ್ ಖರ್ಗೆ

ಹಿಂದೂ ಧರ್ಮೀಯರ ಮೇಲಿನ ದಾಳಿ ವಿರುದ್ಧ ವಿಎಚ್ ಪಿ, ಬಜರಂಗದಳ ಪ್ರತಿಭಟನೆ

ಅಫ್ಘಾನಿಸ್ತಾನ: ವಾಲಿಬಾಲ್ ಆಟಗಾರ್ತಿಯ ಶಿರಚ್ಚೇದನ ನಡೆಸಿದ ತಾಲಿಬಾನಿಗಳು

ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಪ್ರದರ್ಶಿಸಿದ ಸಂಘ ಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

ಇತ್ತೀಚಿನ ಸುದ್ದಿ