ಬಿಜೆಪಿಯ ಭ್ರಷ್ಟಾಚಾರವನ್ನು ಶಾಸಕರೊಬ್ಬರು ಮಂಚದ ಮೇಲೆಯೂ ಕನವರಿಸಿದ್ದರು | ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಬೆಂಗಳೂರು: ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಗೂ ಮುನ್ನ ನಡೆಸಿದ ಸಂಭಾಷಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಲೆಕ್ಷನ್ ಗಿರಾಕಿ ಎಂದು ಹೇಳಿರುವುದೇ ಅಲ್ಲದೇ, ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ವಿಚಾರ ಇದೀಗ ಬಿಜೆಪಿಯ ಬಾಯಿಗೆ ಆಹಾರವಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಆರೋಪಗಳಿಗೆ ಕಾಂಗ್ರೆಸ್ ಇದೀಗ ತಿರುಗೇಟು ನೀಡಿದೆ.
ಸರ್ಕಾರದ ಭ್ರಷ್ಟಾಚಾರವನ್ನು, ಕುಟುಂಬ ಹಸ್ತಕ್ಷೇಪವನ್ನು, ಬಿಜೆಪಿ ನಡೆಸಿದ ಹವಾಲ ದಂಧೆಯನ್ನು, ಬಿಜೆಪಿಗರ ಅಕ್ರಮ ಸಂಪತ್ತನ್ನು, ಮಾರಿಷನ್‌ನಲ್ಲಿ ಬಿಜೆಪಿಗರು ಇಟ್ಟಿರುವ ಬ್ಲಾಕ್ ಮನಿಯನ್ನು ಎಲ್ಲವನ್ನೂ ರಾಜಾರೋಷವಾಗಿ ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದರು. ಇದಕ್ಕೆ ಬಿಜೆಪಿ ಉತ್ತರಿಸಿ, ಜವಾಬ್ದಾರಿಯುತ ಆಡಳಿತ ಪಕ್ಷವೇನಿಸಿಕೊಳ್ಳಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಇನ್ನೂ ಅನಂತ್ ಕುಮಾರ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಸುದ್ದಿಗೋಷ್ಠಿಯ ವೇಳೆ ಗುಪ್ತವಾಗಿ ಮಾತನಾಡಿದ್ದ ವಿಡಿಯೋವನ್ನು ಶೇರ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಹೈಕಮಾಂಡಿಗೆ ಸಲ್ಲಿಕೆಯಾದ ಕಪ್ಪ ಕಾಣಿಕೆ ಯಾವ ಲೂಟಿಯದ್ದು, ಯಾವ ಭ್ರಷ್ಟಾಚಾರದ್ದು ಎಂಬ ಪ್ರಶ್ನೆಗೆ ಉತ್ತರಿಸುವುದೇ? ಹೈಕಮಾಂಡಿಗೆ ಕಪ್ಪ ಸಲ್ಲಿಸಿದ್ದಕ್ಕಾಗಿಯೇ ಯಡಿಯೂರಪ್ಪ ಅವರು ಜೈಲಿಗೆ ಹೋಗುವ ಸ್ಥಿತಿ ಬಂದಿದ್ದೇ? ಎಂದು ಪ್ರಶ್ನಿಸಿದೆ.
ಬಿಜೆಪಿ ಸಿಡಿ ಶಾಸಕರೊಬ್ಬರು ಹಾಸಿಗೆಯ ಮೇಲೂ ಬಿಜೆಪಿಯ ಭ್ರಷ್ಟಾಚಾರವನ್ನು ಕನವರಿಸಿದ್ದರು. ಅದರ ಬಗ್ಗೆ ಬಿಜೆಪಿ ಸ್ಪಷ್ಟನೆ ಕೊಡುವುದೇ!? ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
ಆಪರೇಷನ್ ಕಮಲದಲ್ಲಿ ಭ್ರಷ್ಟ ಬಿಜೆಪಿ ಪಕ್ಷದಿಂದ ನನಗೆ ಹಣದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕ ಶ್ರೀಮಂತ್ ಪಾಟೀಲ್ ಹೇಳಿದ್ದರು. ಅವರ ಹೇಳಿಕೆಯಿಂದ ಬಿಜೆಪಿಯ ಅಧಿಕಾರ ದಾಹ, ಭ್ರಷ್ಟಾಚಾರ, ಸಂವಿಧಾನ & ಪ್ರಜಾಪ್ರಭುತ್ವ ವಿರೋಧಿ ನೀತಿಗಳೆಲ್ಲವೂ ಬಹಿರಂಗವಾಗಿದೆ. ಆಪರೇಷನ್ ಕಮಲಕ್ಕೆ ಬಿಜೆಪಿ ಖರ್ಚು ಮಾಡಿದ ಭ್ರಷ್ಟ ಹಣದ ಲೆಕ್ಕ ನೀಡುವುದೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಎಂ.ಎ. ಸಲೀಂ 6 ವರ್ಷಗಳ ಕಾಲ ಉಚ್ಛಾಟನೆ
ಎಂ.ಎ. ಸಲೀಂ ಅವರು ವಿ.ಎಸ್. ಉಗ್ರಪ್ಪ ಅವರೊಂದಿಗೆ ನಡೆಸಿದ ಖಾಸಗಿ ಮಾತುಕತೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಬಗ್ಗೆ ಹಾಗೂ ಅವರ ಬೇಜವಾಬ್ದಾರಿ ನಡವಳಿಕೆಗಾಗಿ ಕೆಪಿಸಿಸಿ ಮಾಧ್ಯಮ ಸಂಯೋಜಕರಾದ ಎಂ.ಎ. ಸಲೀಂ ಅವರನ್ನ ಶಿಸ್ತು ಪಾಲನಾ ಸಮಿತಿಯ ತೀರ್ಮಾನದಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ 6 ವರ್ಷಗಳವರೆಗೆ ಉಚ್ಚಾಟಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI
ಮಾಜಿ ಪ್ರಧಾನಿ ಮನಮೋಹನ್ ಅವರ ಆರೋಗ್ಯದಲ್ಲಿ ಏರುಪೇರು | ಏಮ್ಸ್ ಆಸ್ಪತ್ರೆಗೆ ದಾಖಲು
ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದವರು ಸಾಕ್ಷ್ಯ ನೀಡಿದ್ದಾರೆ | ನಳಿನ್ ಕುಮಾರ್ ಕಟೀಲ್
“ಸಾವರ್ಕರ್ ರಾಷ್ಟ್ರಪಿತ” ಎಂದು ಬಿಜೆಪಿ ಶೀಘ್ರದಲ್ಲೇ ಘೋಷಿಸುತ್ತದೆ: ಓವೈಸಿ ಹೇಳಿಕೆ
ಡಿ.ಕೆ.ಶಿವಕುಮಾರ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಗುಸುಗುಸು ಮಾತು: ಕೊನೆಗೂ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಉಗ್ರಪ್ಪ
ನೈತಿಕತೆ ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಆಗುತ್ತೆ | ಅನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಕಲೆಕ್ಷನ್ ಪಾರ್ಟಿ: ಸಲೀಂ-ಉಗ್ರಪ್ಪ ಆರೋಪಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ?