ಬಿಜೆಪಿಗೆ ರಾಜೀನಾಮೆ ಪರ್ವ ಆರಂಭವಾಗುತ್ತಾ? | 2ನೇ ಅಸ್ತ್ರ ಪ್ರಯೋಗಕ್ಕೆ ಸಜ್ಜು!
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಏನೇನೋ ಸಾಹಸ ಮಾಡಿ, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರವನ್ನು ಕಟ್ಟಿ ಎರಡು ವರ್ಷ ಆಳ್ವಿಕೆ ನಡೆಸುತ್ತಿರುವಾಗಲೇ, ಕೈಲಾಗದವರಂತೆ ಕುಳಿತಿದ್ದ ಬಿಜೆಪಿ ನಾಯಕರು ಇದೀಗ ನಾಯಕತ್ವಕ್ಕಾಗಿ ಹೊಡೆದಾಡುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಕರ್ನಾಟಕದಾದ್ಯಂತ ಕೇಳಿ ಬರುತ್ತಿದೆ. ಈ ನಡುವೆ ಯಡಿಯೂರಪ್ಪ ಪರ ಇರುವ ಶಾಸಕರು ಬಿಜೆಪಿ ಹೈಕಮಾಂಡ್ ಗೆ ಶಾಕ್ ನೀಡುವ ಸಾಧ್ಯತೆಗಳು ಕಂಡು ಬರುತ್ತಿವೆ.
ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಮಿತ್ರಮಂಡಳಿ ಸಚಿವರು ಇದೀಗ ಬಿಜೆಪಿಯೊಳಗಿನ ಬೆಳವಣಿಗೆಯಿಂದ ಗೊಂದಲಕ್ಕೊಳಗಾಗಿದ್ದಾರೆ. ಹೀಗಾಗಿಯೇ ಯಡಿಯೂರಪ್ಪರನ್ನು ಟಚ್ ಮಾಡಿದ್ರೆ, ರಾಜೀನಾಮೆ ನೀಡುತ್ತೇವೆ ಎಂದು ಹೇಳುವ ಸಾಧ್ಯತೆಗಳು ಕಂಡು ಬಂದಿದೆ ಎಂದು ಹೇಳಲಾಗಿದೆ.
ಪಕ್ಷದ ವರಿಷ್ಠರ ತೀರ್ಮಾನಕ್ಕೆ ತಾನು ಬದ್ಧ ಎಂದು ಬಿ.ಎಸ್.ಯಡಿಯೂರಪ್ಪನವರು ಹೇಳಿಕೊಂಡಿದ್ದರೂ ಅವರ ಮಿತ್ರ ಶಾಸಕರು ರಾಜೀನಾಮೆ ಅಸ್ತ್ರವನ್ನು ದೆಹಲಿಯಲ್ಲಿರುವ ವರಿಷ್ಟರ ಮೇಲೆ ಪ್ರಯೋಗಿಸಲು ಮುಂದಾಗಿದ್ದು, ಈ ಬಗ್ಗೆ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.
ಹೊಸ ಸರ್ಕಾರ ಬಂದರೆ, ಮಿತ್ರಮಂಡಳಿಗೆ ಅವಕಾಶ ಸಿಗುವುದು ಅನುಮಾನ ಹೀಗಾಗಿಯೇ ಬಾಂಬೆ ಮಿತ್ರ ಮಂಡಳಿ ರಾಜೀನಾಮೆಯ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆಗಳು ಕಂಡು ಬಂದಿದೆ. ಇನ್ನೂ ಆರಂಭದಲ್ಲಿ ಸ್ವಾಮೀಜಿಗಳ ಅಸ್ತ್ರವನ್ನು ಯಡಿಯೂರಪ್ಪ ಪ್ರಯೋಗಿಸಿದ್ದರು. ಇದೀಗ ಎರಡನೇ ಅಸ್ತ್ರವಾಗಿ ಮಿತ್ರಮಂಡಳಿಯ ರಾಜೀನಾಮೆಯ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಬತ್ತಳಿಕೆಯಲ್ಲಿ ಇನ್ನೆಷ್ಟು ಅಸ್ತ್ರಗಳಿವೆ ಎನ್ನುವುದು ತಿಳಿದಿಲ್ಲ ಆದರೆ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೂ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸುದ್ದಿಗಳು…
ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ?
ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವುದು ಸೂಕ್ತವಲ್ಲ | ಎನ್.ಮಹೇಶ್
ಬಿಗ್ ಬ್ರೇಕಿಂಗ್ ನ್ಯೂಸ್: ರಾಜೀನಾಮೆ ಬಗ್ಗೆ ಸಿಎಂ ಯಡಿಯೂರಪ್ಪರಿಂದ ಮಹತ್ವದ ಹೇಳಿಕೆ
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಅದೇ ಬಸ್ ನಡಿಗೆ ಸಿಲುಕಿ ಬಲಿಯಾದಳು | ಹೃದಯ ವಿದ್ರಾವಕ ಘಟನೆ