ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರ ಲಾಭಕ್ಕಾಗಿ ವಿವಾದಿತ ಕೃಷಿ ಕಾನೂನು ಜಾರಿ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ
ನವದೆಹಲಿ: ಬಿಜೆಪಿಯು ತನ್ನ ಕೋಟ್ಯಾಧಿಪತಿ ಸ್ನೇಹಿತರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನೂತನ ಮೂರು ಕೃಷಿ ಕಾನೂನುಗಳನ್ನು ರೂಪಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಅದಾನಿ, ಪ್ರತಿ ಕೆ.ಜಿ ಸೇಬು ದರವನ್ನು 16 ರೂ. ಕಡಿಮೆ ಮಾಡಿರುವ ವರದಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ರೈತರ ಉತ್ಪನ್ನಗಳನ್ನು ನಿರ್ಧರಿಸುವ ಹಕ್ಕನ್ನು ಆಡಳಿತ ಪಕ್ಷದ ಕೋಟ್ಯಧಿಪತಿ ಸ್ನೇಹಿತರಿಗೆ ನೀಡಿದರೆ ಹೀಗೆ ಸಂಭವಿಸುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ಕೋಟ್ಯಾಧಿಪತಿ ಸ್ನೇಹಿತರ ಲಾಭಕ್ಕಾಗಿ ವಿವಾದಿತ ಕೃಷಿ ಕಾನೂನನ್ನು ಬಿಜೆಪಿ ಜಾರಿಗೊಳಿಸಿದೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜೊತೆ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿವೆ ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
1,500 ವರ್ಷಗಳ ಹಳೆಯ, ಜೊತೆಯಾಗಿ ಸಮಾಧಿ ಮಾಡಲಾದ ಪ್ರೇಮಿಗಳ ಅಸ್ಥಿಪಂಜರಗಳು ಪತ್ತೆ !
ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ
ಶಾಕಿಂಗ್ ನ್ಯೂಸ್ : ಭಾರತದ ಈ ದೊಡ್ಡ ನಗರ ಜಲಸಮಾಧಿಯಾಗಲಿದೆ!
ನೀಚ ಕೃತ್ಯ: ಶಾಲೆಯ ಕಿಟಕಿಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು
ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ
ಮಮತಾ ಬ್ಯಾನರ್ಜಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಪ್ರಾಧ್ಯಾಪಕ!
ಯೋಗಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್!
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!