ಬಿಜೆಪಿಯ ಪೇಯ್ಡ್ ಪ್ರಚಾರವನ್ನು ನಾಶಪಡಿಸುತ್ತೇವೆ | ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ

raksha ramaiha
14/07/2021

ಮಂಗಳೂರು: ಯುವಕರು ಬಿಜೆಪಿಯತ್ತ ಒಲವು ತೋರಿಸಲು ಬಿಜೆಪಿಯ ಸೋಶಿಯಲ್ ಮೀಡಿಯಾ ಹೈಪ್ ಕಾರಣ. ಸಾಮಾಜಿಕ ಜಾಲತಾಣಕ್ಕಾಗಿಯೇ ಬಿಜೆಪಿಯವರು ರೂ.50-60 ಕೋಟಿ ಖರ್ಚು ಮಾಡುತ್ತಿದ್ದಾರೆ. ಅವರದ್ದು ಪೇಯ್ಡ್ ಸೋಶಿಯಲ್ ಮೀಡಿಯಾವಾಗಿದ್ದು ಇದು ಯುವಕರ ಮೇಲೆ  ಅನಿರೀಕ್ಷಿತ ಫಲಿತಾಂಶ ನೀಡಿದೆ ರಾಜ್ಯ ಯುವ ಕಾಂಗ್ರೆಸ್’ನ ನೂತನ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿಯ ನಿಜವಾದ ಬಣ್ಣವನ್ನು ಯುವಕರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್’ಗೆ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಎಲ್ಲಾ ಕ್ಷೇತ್ರಗಳಲ್ಲಿ ಅಭಿಯಾನ ಆರಂಭಿಸಲಿದ್ದೇವೆ. ಬಿಜೆಪಿಯ ಪೇಯ್ಡ್ ಪ್ರಚಾರವನ್ನು ನಾಶಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಇದೇ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ನಡೆದ ಮಹಮ್ಮದ್ ಹ್ಯಾರಿಸ್ ನಲಪಾಡ್ ಜೊತೆಗಿನ ಹಗ್ಗಜಗ್ಗಾಟ ಕುರಿತು ಮಾತನಾಡಿದ ಅವರು, ಇದೊಂದು ಆಂತರಿಕ ವಿಚಾರವಾಗಿದ್ದು, ಇದೀಗ ಎಲ್ಲಾ ಮನಸ್ತಾಪಗಳೂ ಬಗೆಹರಿದಿವೆ. ನನ್ನ ಹಾಗೂ ನಲಪಾಡ್ ನಡುವೆ ಬಣಗಳಿಲ್ಲ. ಹಿರಿಯ ನಾಯಕರು ಒಂದು ತಿಂಗಳ ಮಟ್ಟಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅದೇ ರೀತಿ 3 ತಿಂಗಳು, 6 ತಿಂಗಳು, 2 ವರ್ಷ ನೀಡಿದರು ಸೇವೆಗೆ ಸಿದ್ಧ ಎಂದರು.

ಇನ್ನಷ್ಟು ಸುದ್ದಿಗಳು:

ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಸ್ಸೈಯಿಂದ ದೌರ್ಜನ್ಯ ಆರೋಪ | ಸಿದ್ದರಾಮಯ್ಯ ಆಕ್ರೋಶ

ಕಾಂಗ್ರೆಸ್ ನಲ್ಲಿ ಅರ್ಹರು ಬಹಳಷ್ಟಿದ್ದಾರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ರೆ ಯಾರೂ ಇಲ್ಲ | ಪ್ರಿಯಾಂಕ್ ಖರ್ಗೆ ತಿರುಗೇಟು

ತೈಲ ಬೆಲೆ ಏರಿಕೆಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಸಚಿವ ಧರ್ಮೇಂದ್ರ ಪ್ರಧಾನ್ ಕಿಡಿ

ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ | ಕಾಂಗ್ರೆಸ್ ಗಂಭೀರ ಆರೋಪ

ಇತ್ತೀಚಿನ ಸುದ್ದಿ

Exit mobile version