ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ - Mahanayaka
4:26 AM Wednesday 5 - February 2025

ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ

mamath
09/03/2022

ಕೋಲ್ಕತ್ತಾ: 2024ರಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕಾದರೆ ಪ್ರತಿ ಮನೆಯಲ್ಲೂ ಕೋಟೆ ಕಟ್ಟಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

2024ರಲ್ಲಿ ಸಂಸತ್‌ ಹಾಗೂ 2023ರಲ್ಲಿ ರಾಜ್ಯ ಪಂಚಾಯತ್‌ ಚುನಾವಣೆಗಳು ನಡೆಯಲಿವೆ. ಹೀಗಾಗಿ ಟಿಎಂಸಿ ವರಿಷ್ಠರು ಚುನಾವಣಾ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶ, ಬಿಹಾರ, ತ್ರಿಪುರಾ, ಅಸ್ಸಾಂ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಕೋಟೆಗಳನ್ನು ನಿರ್ಮಿಸಬೇಕಾಗುತ್ತದೆ. ನೀವು ಸಕ್ರಿಯರಾಗಿರಬೇಕು. ಬೆಳಗ್ಗೆ ಒಂದು ಟ್ವೀಟ್‌ ಇದ್ದರೆ, ಮಧ್ಯಾಹ್ನ ಮತ್ತೊಂದು ವೈರಲ್‌ ಆಗಬಹುದು. ಹೀಗೆ ವ್ಯರ್ಥ ಮಾಡಲು ಸಮಯವಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದ ಮಮತಾ ಬ್ಯಾನರ್ಜಿ, ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯವಿಲ್ಲದ ಕಾರಣ ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ. ಪರ್ಯಾಯ ಶಕ್ತಿ ಬಂದ ಮೇಲೆ ನೀವು ಅಧಿಕಾರದಲ್ಲಿ ಉಳಿಯುವುದಿಲ್ಲ. ಪರ್ಯಾಯ ಶಕ್ತಿ ರೂಪಿಸಲು ರಾಜಕೀಯ ಪಕ್ಷಗಳು ಒಗ್ಗೂಡಬೇಕಿದೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಉದ್ದೇಶವನ್ನು ಪೂರೈಸಲಾಗದು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.

ಮೂರು ತಿಂಗಳ ಅವಧಿಯಲ್ಲಿ ಟಿಎಂಸಿಯ ಚಿಹ್ನೆ ಹಲವು ಮನೆಗಳಿಗೆ ತಲುಪಿರುವುದು ನಮಗೆ ಸಂತಸ ತಂದಿದೆ. ನಾವು ಮೊದಲೇ ಇದನ್ನು ಪ್ರಾರಂಭಿಸಿದ್ದರೆ ಮತ್ತಷ್ಟು ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂದು ಅವರು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್‌ ನಲ್ಲಿ ಶೆಲ್ ದಾಳಿ ನಿಂತ ಬಳಿಕ ನವೀನ್ ಮೃತದೇಹ ತರುವ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪೊಲೀಸರಿಗೆ ಹೆದರಿ ಟಿಡಿಪಿ ಕಾರ್ಯಕರ್ತ ಆತ್ಮಹತ್ಯೆ

ರಷ್ಯಾ ಭಯೋತ್ಪಾದಕ ದೇಶ ಎಂದು ಘೋಷಿಸಿ: ಬ್ರಿಟನ್‌ ಸಂಸತ್ತಿಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ: ಮಗ – ತಂದೆ ಇಬ್ಬರೂ ಸಾವಿಗೆ ಶರಣು

 

ಇತ್ತೀಚಿನ ಸುದ್ದಿ