ಬಿಜೆಪಿಯಿಂದ 'ದಿ ಕಾಶ್ಮೀರ್ ಫೈಲ್ಸ್ ' ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್ - Mahanayaka
9:17 AM Tuesday 24 - December 2024

ಬಿಜೆಪಿಯಿಂದ ‘ದಿ ಕಾಶ್ಮೀರ್ ಫೈಲ್ಸ್ ‘ ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್

sanjay rawath1
20/03/2022

ಮುಂಬೈ: ‘ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಹಿಂದೂ ಪಂಡಿತರ ಪಲಾಯನ, ಅವರ ಹತ್ಯೆ, ಅವರ ಮೇಲಾದ ದೌರ್ಜನ್ಯವನ್ನಷ್ಟೇ ತೋರಿಸಲಾಗಿದೆ. ಚುನಾವಣೆ ದೃಷ್ಟಿಯಿಂದ ಈ ಕಥೆಯನ್ನಿಟ್ಟುಕೊಂಡ ಹಿಂದೂ-ಮುಸ್ಲಿಮರನ್ನು ಒಡೆಯುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಹೇಳಿರುವ ಅವರು, ‘ದಿ ಕಾಶ್ಮೀರ್ ಫೈಲ್ಸ್ ‘ ಚಿತ್ರವನ್ನು ಪ್ರಚಾರ ಮಾಡಿ ಮುಂಬರುವ ಗುಜರಾತ್ ಮತ್ತು ರಾಜಸ್ಥಾನ್ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯನ್ನು ಬಿಜೆಪಿ ನಡೆಸುತ್ತಿದೆ ಎಂದರು.

ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವುದೇ ಈ ಚಿತ್ರವನ್ನು ಹೆಚ್ಚು ಭಾವನಾತ್ಮಕವಾಗಿ ಪ್ರಚಾರಗೊಳಿಸಲು ಕಾರಣ. ಆದರೆ ವಲಸೆ ಹೋದ ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಕರೆ ತರುವುದಾಗಿ ಭರವಸೆ ನೀಡಿದ್ದ ಬಿಜೆಪಿಗೆ ಇನ್ನೂ ಅದು ಸಾಧ್ಯವಾಗಿಲ್ಲ. ಸಂವಿಧಾನದ ವಿಧಿ 370 ರದ್ದುಗೊಂಡರೂ ಕಾಶ್ಮೀರಿ ಪಂಡಿತರಿಗೆ ಕಾಶ್ಮೀರವನ್ನು ಮರಳಿ ನೋಡುವ ಸೌಭಾಗ್ಯ ದೊರೆತಿಲ್ಲ ಎಂದಿದ್ದಾರೆ.

ಚಿತ್ರದಲ್ಲಿ ಹಲವಾರು ಕಠಿಣ ಸತ್ಯಗಳನ್ನು ತೋರಿಸಿಲ್ಲ. ಆದರೆ ಚಿತ್ರದಲ್ಲಿರುವುದೇ ಕಠಿಣ ಸತ್ಯಗಳು ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಆ ಸಮಯದಲ್ಲಿ ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಮುಸ್ಲಿಮರು, ಸಿಖ್ಖರ ಹತ್ಯೆ ಕೂಡಾ ನಡೆದಿದೆ. ಆದರೆ ಚಿತ್ರದಲ್ಲಿ ಹಿಂದೂ ಪಂಡಿತರ ಪಲಾಯನ, ಅವರ ಹತ್ಯೆ, ಅವರ ಮೇಲಾದ ದೌರ್ಜನ್ಯವನ್ನಷ್ಟೇ ತೋರಿಸಲಾಗಿದೆ. ಚುನಾವಣೆ ದೃಷ್ಟಿಯಿಂದ ಈ ಕಥೆಯನ್ನಿಟ್ಟುಕೊಂಡ ಹಿಂದೂ-ಮುಸ್ಲಿಮರನ್ನು ಒಡೆಯುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟ ಎಂದವರು ಆಪಾದಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸುವ ಬಗ್ಗೆ ಎನ್ ಡಿಎ ಭರವಸೆ ನೀಡಿತ್ತು. ಆದರೆ ಇದು ಇನ್ನೂ ಕೈಗೂಡಿಲ್ಲ ಎಂದು ಅವರು ಇದೇ ವೇಳೆ ಸಾಮ್ನಾದಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ್‌

ಹಿಜಾಬ್  ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ  ಬೆದರಿಕೆ: ಇಬ್ಬರ ಬಂಧನ

ಬಿಜೆಪಿಯವರು ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಗೆದ್ದು ಬಂದಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಮೂಲ್ಕಿ ಬಸ್ ನಿಲ್ದಾಣದಲ್ಲಿ ಕಾರ್ಕಳದ ವ್ಯಕ್ತಿಯ ಶವ ಪತ್ತೆ

ಇತ್ತೀಚಿನ ಸುದ್ದಿ