ಬ್ಲ್ಯಾಕ್ ಫಂಗಸ್ “ಸಾಂಕ್ರಾಮಿಕ ರೋಗ” ಎಂದು ಘೋಷಣೆ - Mahanayaka

ಬ್ಲ್ಯಾಕ್ ಫಂಗಸ್ “ಸಾಂಕ್ರಾಮಿಕ ರೋಗ” ಎಂದು ಘೋಷಣೆ

black fungus
19/05/2021

ಜೈಪುರ: ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಕಂಡು ಬರುತ್ತಿರುವ ಕಪ್ಪು ಶಿಲೀಂದ್ರ ಅಥವಾ ಬ್ಲ್ಯಾಕ್ ಫಂಗಸ್ ಸೋಂಕನ್ನು  ಸಾಂಕ್ರಾಮಿಕ ರೋಗ ಎಂದು ರಾಜಸ್ಥಾನ ಸರ್ಕಾರವು ಘೋಷಿಸಿದೆ.

ರಾಜಸ್ಥಾನದಲ್ಲಿ ಸುಮಾರು 100 ಜನರು ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಒಳಗಾಗಿದ್ದು, ಜೈಪುರದ ಸವಾಯಿ ಮಾನ್‌ ಸಿಂಗ್‌ (ಎಸ್‌ಎಂಎಸ್‌) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.

ರಾಜಸ್ಥಾನ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ‘ಮ್ಯೂಕರ್‌ಮೈಕೊಸಿಸ್‌’ ಸಾಂಕ್ರಾಮಿಕ ರೋಗ ಎಂದು ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಖಿಲ್‌ ಅರೋರಾ ಅಧಿಸೂಚನೆ ಹೊರಡಿಸಿದ್ದಾರೆ.

ಕೊರೊನಾ ವೈರಸ್‌ ಮತ್ತು ಬ್ಲ್ಯಾಕ್‌ ಫಂಗಸ್‌ ಎರಡೂ ಕಾಯಿಲೆಗಳಿಗೂ ಸಂಯೋಜಿತ ಚಿಕಿತ್ಸೆ ಖಚಿತ ಪಡಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಖಿಲ್‌ ಅರೋರಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ