ಎಫ್‌'ಡಿಸಿಐಯಿಂದ ಪ್ರಾಯೋಜಿತ ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌'ವೇರ್ ಫ್ಯಾಷನ್ ಟೂರ್- 2022 - Mahanayaka
9:09 AM Thursday 12 - December 2024

ಎಫ್‌’ಡಿಸಿಐಯಿಂದ ಪ್ರಾಯೋಜಿತ ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌’ವೇರ್ ಫ್ಯಾಷನ್ ಟೂರ್– 2022

jhanvi kapoor
30/11/2022

‘ಪ್ರೈಡ್ ಇನ್ ಸಸ್ಟೇನಬಲ್‌ ಫ್ಯಾಷನ್‌’ ಅನ್ನು ಪ್ರದರ್ಶಿಸಿದ ಅಮಿತ್‌ ಅಗರ್ವಾಲ್‌ – ಸಸ್ಟೇನಬಲ್ ಫ್ಯಾಷನ್ ತಂತ್ರಗಳನ್ನು ಒಳಗೊಂಡ ಪರಿಕಲ್ಪನೆ ಇದಾಗಿದ್ದು, ಪರಿಸರಕ್ಕೆ ಪೂರಕವಾದ ಸಸ್ಟೇನಬಿಲಿಟಿಯಿಂದ ಪ್ರೇರಿತವಾಗಿದೆ ಮತ್ತು ಇದನ್ನು ಆರ್ಕಿಟೆಕ್ಚರಲ್ ಡಿಸೈನರ್ ನುರು ಕರೀಮ್‌ ರೂಪಿಸಿದ್ದು, ಇದನ್ನು ಝಾನ್ವಿ ಕಪೂರ್ ರ್‍ಯಾಂಪ್ ವಾಕ್ ಮಾಡಿದ್ದಾರೆ.

ನವೆಂಬರ್ 30, 2022: ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್ ಫ್ಯಾಷನ್ ಟೂರ್‌ನ 16ನೇ ಆವೃತ್ತಿಯನ್ನು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಪ್ರಾಯೋಜಿಸಿದ್ದು, ಬೌಲ್ಡರ್ ಹಿಲ್ಸ್ ಗಾಲ್ಫ್‌ ಮತ್ತು ಕಂಟ್ರಿ ಕ್ಲಬ್‌ನಲ್ಲಿ 2022 ನವೆಂಬರ್ 25 ರಂದು ಹೈದರಾಬಾದ್‌ನಲ್ಲಿ ನಡೆಯಿತು. ಸೆಲೆಬ್ರಿಟಿ ಡಿಸೈನರ್ ಅಮಿತ್ ಅಗರ್‌ವಾಲ್‌ ಮತ್ತು ಭಾರತದ ಅತ್ಯಂತ ಪ್ರಭಾವಿ ಆರ್ಕಿಟೆಕ್ಟ್‌ ನುರು ಕರೀಮ್‌ ‘ಪ್ರೈಡ್ ಇನ್ ಸಸ್ಟೇನಬಲ್ ಫ್ಯಾಷನ್’ ಅನ್ನು ಪ್ರಸ್ತುತಪಡಿಸಿದ್ದು, ಸುಸ್ಥಿರತಯನ್ನು ಆಧರಿಸಿದ ವಿನ್ಯಾಸಗಳ ವಿಶಿಷ್ಟ ಸಂಗ್ರಹವನ್ನು ಇದರಲ್ಲಿ ಪ್ರದರ್ಶಿಸಲಾಗಿದೆ. ಈ ಶೋನಲ್ಲಿ ಯೂತ್ ಐಕಾನ್ ಝಾನ್ವಿ ಕಪೂರ್‌ ದಿರಿಸುಗಳನ್ನು ಪ್ರದರ್ಶಿಸಿದರು.

ಡಿಸೈನರ್ ಅಮಿತ್‌ ಅಗರ್‌ವಾಲ್‌ಗೆ ಸಸ್ಟೇನಬಿಲಿಟಿಯನ್ನು ಜೀವಂತವಾಗಿಡುವುದು ಅತ್ಯಂತ ಮುಖ್ಯ ಆದ್ಯತೆಯಾಗಿದ್ದು, ಇದಕ್ಕೆ ಅವರು ಸಾಂಪ್ರದಾಯಿಕ ಕಲೆ ಮತ್ತು ಹೊಸ ಕಾಲದ ಸಾಮಗ್ರಿಗಳನ್ನು ಜೋಡಿಸಿದ್ದಾರೆ.

ಈ ಮೂಲಕ ಉಡುಪು ತನ್ನ ಮೂಲ ಸೌಂದರ್ಯ ಮತ್ತು ಅಸಲೀಯತ್ತನ್ನು ಆಧುನಿಕತೆಯ ಜೊತೆಗೂ ಉಳಿಸಿಕೊಳ್ಳುವಂತೆ ಅವರು ನೋಡಿಕೊಂಡಿದ್ದಾರೆ. ನುರು ಕರೀಮ್ ಅವರ ಭೂಮಿಗೆ ಪೂರಕವಾದ ವಿನ್ಯಾಸ ಸಿದ್ಧಾಂತವೂ ಜೊತೆಯಾಗಿದೆ. ಇವರು ನಿಸರ್ಗದಿಂದ ಪ್ರೇರಿತವಾದ ವಿನ್ಯಾಸವನ್ನು ಮಾಡಿದ್ದಾರೆ ಮತ್ತು ಇದನ್ನು ಮರುಬಳಕೆ ಮಾಡಬಹುದಾದ ಸಾಮಗ್ರಿಗಳನ್ನು ಬಳಸಿದ್ದಾರೆ. ಫ್ಯಾಷನ್ ಅನ್ನು ಹೆಚ್ಚು ಭೂಮಿಗೆ ಪೂರಕವಾಗಿಸುವ ನಿಟ್ಟಿನಲ್ಲಿ ಈ ಫ್ಯಾಷನ್ ಶೋ ಅತ್ಯಂತ ಮಹತ್ವದ ಸಂಗತಿಯಾಗಿತ್ತು.

ಅದ್ಭುತವಾದ ಮತ್ತು ಆಹ್ಲಾದಕರವಾದ “ಪ್ರೈಡ್ ಮತ್ತು ಅಥೆಂಟಿಸಿಟಿ” ಅಭಿವ್ಯಕ್ತಿಗಳನ್ನು ಪ್ರತಿ ಅಂಶದಲ್ಲೂ ವ್ಯಕ್ತಪಡಿಸಲಾಗಿತ್ತು. ಯುವಕರಿಗೆ ಸಸ್ಟೇನಬಿಲಿಟಿ ಎಂಬುದು ಕೇವಲ ಒಂದು ಶಬ್ದವಲ್ಲ. ವಿವಿಧ ಸಸ್ಟೇನಬಿಲಿಟಿ ಅಂಶಗಳನ್ನು ಅಮಿತ್ ಅಗರ್‌ವಾಲ್ ಅವರ ಕಲೆಕ್ಷನ್‌ ತೋರಿಸಿದೆ. ಇದರಲ್ಲಿ ಹೊಸ ಕಾಲದ ಸಾಮಗ್ರಿಗಳನ್ನು ಬಳಸಿ ಬಟ್ಟೆಗಳನ್ನು ಮಾಡುವುದು, ಸಾಂಪ್ರದಾಯಿಕ ದೇಶೀಯ ಕರಕುಶಲ ಸಾಮಗ್ರಿಗಳನ್ನು ಪ್ರೋತ್ಸಾಹಿಸುವ ವಿನ್ಯಾಸ ತಂತ್ರಗಳೂ ಇದರಲ್ಲಿವೆ. ಹೊಸ ಕಾಲದ ವಧುವಿನ ದಿರಿಸು, ಆಧುನಿಕ ಕಾಲಂ ಡ್ರೆಸ್‌ಗಳು, ಟಕ್ಸೆಡೋಗಳು ಮತ್ತು ಜಾಕೆಟ್‌ಗಳನ್ನು ಇದರಲ್ಲಿ ಪ್ರದರ್ಶಿಸಲಾಯಿತು.

ಶೋ ಬಗ್ಗೆ ಮಾತನಾಡಿದ ಡಿಸೈನರ್ ಅಮಿತ್‌ ಅಗರ್‌ವಾಲ್‌ “ಕಳೆದ ಒಂದು ದಶಕದಲ್ಲಿ ನಾವು ಸಸ್ಟೇನಬಿಲಿಟಿಯನ್ನು ಪರಿಚಯಿಸಿದ್ದು, ಮೂಲ ಕಲ್ಪನೆಗಳನ್ನು ಹಾಗೆಯೇ ಉಳಿಸಿಕೊಂಡು ಹೊಸ ವಿನ್ಯಾಸವನ್ನು ರೂಪಿಸುತ್ತಿದ್ದೇವೆ. ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್ ಟೂರ್‌ ನಮಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇದನ್ನು ಜನಪ್ರಿಯ ಆರ್ಟಿಟೆಕ್ಟ್‌ ನುರು ಕರೀಮ್ ಜೊತೆಗೆ ಪ್ರಸ್ತುತಪಡಿಸಿದ್ದೇವೆ. ಸಸ್ಟೇನಬಿಲಿಟಿಯನ್ನು ಮುನ್ನೆಲೆಗೆ ತರುವ ನಮ್ಮ ಸಿದ್ಧಾಂತಕ್ಕೆ ಈ ಶೋ ಪೂರಕವಾಗಿದೆ” ಎಂದರು.

ನ್ಯೂಡೆಸ್‌ನ ಸಂಸ್ಥಾಪಕಿ ಮತ್ತು ಪ್ರಿನ್ಸಿಪಲ್‌ ಆರ್ಕಿಟೆಕ್ಟ್‌ ನುರು ಕರೀಮ್ ಮಾತನಾಡಿ “ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್ ಫ್ಯಾಷನ್ ಟೂರ್‌ನಲ್ಲಿ ಜನಪ್ರಿಯ ಡಿಸೈನರ್‌ ಜೊತೆ ಸೇರಿಕೊಂಡಿರುವುದು ನನಗೆ ಹೆಮ್ಮೆಯ ಸಂಗತಿ. ಆರ್ಕಿಟೆಕ್ಚರ್ ಮತ್ತು ಫ್ಯಾಷನ್ ಸೆಲೆಬ್ರಿಟಿಗಳ ಜೊತೆಗಿನ ಸಹಭಾಗಿತ್ವವು ಮೆಂಟರ್ ಮತ್ತು ಇನ್‌ಸ್ಪಿರೇಶನ್‌ ಆಗಿ ಪರಿಸರವನ್ನು ಪ್ರೀತಿಸುವ ಕೆಲಸವಾಗಿದೆ. ನಮ್ಮ ಮುಂದಿನ ತಲೆಮಾರಿಗೆ ನಾವು ಇತಿಹಾಸವನ್ನು ಉಳಿಸುವುದಕ್ಕೆ ಜವಾಬ್ದಾರಿಯುತವಾಗಿ ವಿನ್ಯಾಸ ಮಾಡಬೇಕು ಮತ್ತು ನಮ್ಮ ಜಗತ್ತನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕಿದೆ. ಈ ವಿಶಿಷ್ಟ ಥಿಮ್‌ನಲ್ಲಿ ಈ ಬಾರಿಯ ಫ್ಯಾಷನ್ ಟೂರ್ ಗಮನ ಹರಿಸಿರುವುದು ಅತ್ಯಂತ ಉತ್ಸಾಹಕರವಾಗಿದೆ” ಎಂದರು.

ಅದ್ಭುತ ಫ್ಯಾಷನ್ ಶೋ ಜೊತೆಗೆ ಈ ವರ್ಷದ ಫ್ಯಾಷನ್ ಟೂರ್‌ನಲ್ಲಿ ವಿಶಿಷ್ಟ ಸಂಗತಿಯನ್ನೂ ಅಳವಡಿಸಿಕೊಳ್ಳಲಾಗಿದ್ದು, ಆಶಿಶ್‌ ಸೋನಿ ಮತ್ತು ಎಫ್‌ಡಿಸಿಐ ಕ್ಯುರೇಟ್ ಮಾಡಿದ ‘ದಿಸ್ ಈಸ್ ನಾಟ್ ಎ ಟಿ ಶರ್ಟ್‌’ ಎಂದು ಕರೆಯಲಾದ ‘ಸ್ಟೈಲ್ ಗ್ಯಾಲರಿ’ ಅನ್ನು ಪ್ರದರ್ಶಿಸಲಾಯಿತು. 60 ಕ್ಕೂ ಹೆಚ್ಚು ಡಿಸೈನರ್‌ಗಳು ಮತ್ತು ದೇಶೀಯ ಫ್ಯಾಷನ್ ಲೇಬಲ್‌ಗಳು ವಿನ್ಯಾಸ ಮಾಡಿದ ಟಿ ಶರ್ಟ್‌ ಅನ್ನು ಪ್ರದರ್ಶಿಸಲಾಯಿತು. ಸ್ಟೈಲ್ ಗ್ಯಾಲರಿಯನ್ನು ಸಸ್ಟೇನಬಿಲಿಟಿ ಧ್ಯೇಯವನ್ನು ಇಟ್ಟುಕೊಂಡು ವಿನ್ಯಾಸ ಮಾಡಲಾಗಿತ್ತು. ಇದಕ್ಕಾಗಿ ಮರುಬಳಕೆ ಮಾಡಿದ ಸಾಮಗ್ರಿಗಳನ್ನು ಬಳಸಲಾಗಿತ್ತು.

ಇದು ಫ್ಯಾಷನ್‌ ಟುರ್‌ನ ಮೂಲ ಉದ್ದೇಶವಾದ ಹೆಚ್ಚು ಸುಸ್ಥಿರವಾಗುವುದು ಮತ್ತು ಪರಿಸರ ಸ್ನೇಹಿಯಾಗುವ ಕಡೆಗೆ ಇನ್ನಷ್ಟು ಪೂರಕವಾಗಿತ್ತು. ಸ್ಟೈಲ್ ಗ್ಯಾಲರಿಯಲ್ಲಿ ‘ಸ್ಟೆಪ್‌ ಇಂಟು ದಿ ಮೆಟಾವರ್ಸ್‌’ ಬೂತ್‌ನಲ್ಲಿ ಫ್ಯಾಷನ್ ಟೂರ್‌ನ ಮೆಟಾವರ್ಸ್‌ ಅವತಾರ್ ಆಗಿರುವ ‘ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್ ಪಾರ್ಕ್‌’ನ ಉತ್ಸಾಹಕರ ವೈಶಿಷ್ಟ್ಯವೂ ಒಳಗೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪೆರ್ನಾಡ್ ರಿಕಾರ್ಡ್‌ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮೊಹಿಂದ್ರಾ “16ನೇ ಆವೃತ್ತಿಯ ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್ ಟೂರ್‌ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಉದ್ಯಮದ ಡೈನಾಮಿಕ್ ಅನ್ನು ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿದ್ದು, ಹೆಚ್ಚು ಸಮಗ್ರ, ವೈವಿಧ್ಯಮಯ ಮತ್ತು ಯೂತ್‌ಫುಲ್ ಆಗಿರುವ ಆಕರ್ಷಕ ಹೊಸ ಫಾರ್ಮ್ಯಾಟ್ ಅನ್ನು ಹೊಂದಿದೆ. ಹೈದರಾಬಾದ್‌ ಶೋ ಅನ್ನು ಎಫ್‌ಡಿಸಿಐ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಫ್ಯಾಷನ್‌ನ ಸಸ್ಟೇನಬಿಲಿಟಿಯನ್ನು ಮುಖ್ಯ ಅಂಶವನ್ನಾಗಿ ಹೊಂದಿತ್ತು. ಅಮಿತ್ ಅಗರ್‌ವಾಲ್‌ ಅವರ ದೇಶೀಯ ಹಾಗೂ ಆಧುನಿಕ ಕಲೆಕ್ಷನ್‌ ಮತ್ತು ನುರು ಕರೀಮ್ ಅವರ ಅದ್ಭುತ ಸೆಟ್ ವಿನ್ಯಾಸ ಇದರಲ್ಲಿತ್ತು. ಈ ಅನುಭವವನ್ನು ಭೌತಿಕ ಜಗತ್ತಿನಲ್ಲಿ ಮಾತ್ರ ರೂಪಿಸಲಾಗಿರಲಿಲ್ಲ. ಬದಲಿಗೆ, ಈ ವರ್ಷ ಮೆಟಾವರ್ಸ್‌ ಅನುಭವವನ್ನೂ ಫ್ಯಾಷನ್ ಟೂರ್ ಹೊಂದಿತ್ತು. ಇದರೊಂದಿಗೆ, ಫ್ಯಾಷನ್ ಟೂರ್‌ನ ಈ ಆವೃತ್ತಿಯಾದ್ಯಂತ ಉತ್ಸಾಹಕರ ಅನ್ವೇಷಣೆಯನ್ನು ನಾವು ಮಾಡುತ್ತಲೇ ಇದ್ದೆವು” ಎಂದರು.

ಫ್ಯಾಷನ್‌ ಟೂರ್‌ನ ಹೊಸ ಅವತಾರ್‌ ಬಗ್ಗೆ ಮಾತನಾಡಿದ ಎಫ್‌ಡಿಸಿಐ ಚೇರ್ಮನ್‌ ಸುನೀಲ್‌ ಸೇಥಿ “ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ ಉದ್ಯಮದಲ್ಲಿ ಪ್ರಮುಖ ಹೆಸರಾಗಿರುವ ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್ ಟೂರ್‌ ಜೊತೆಗೆ ಪಾಲುದಾರಿಕೆ ವಹಿಸಲು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್‌ ಇಂಡಿಯಾ ಹೆಮ್ಮೆ ಹೊಂದಿದೆ. ಹೈದರಾಬಾದ್ ಆವೃತ್ತಿಯಲ್ಲಿ ಡಿಸೈನರ್ ಅಮಿತ್‌ ಅಗರ್‌ವಾಲ್‌ ಮತ್ತು ಆರ್ಕಿಟೆಕ್ಟ್‌ ನುರು ಕರೀಮ್ ಅವರೊಂದಿಗೆ ಸಸ್ಟೇನಬಲ್ ಫ್ಯಾಷನ್‌ನಲ್ಲಿ ಹೊಸ ಅಲೆಯನ್ನು ಎಬ್ಬಿಸುವುದು ನಮ್ಮ ಧ್ಯೇಯವಾಗಿತ್ತು. ಪ್ಯಾಷನ್ ಟೂರ್ ಅನ್ನು ಇನ್ನಷ್ಟು ಸಮಗ್ರವಾಗಿಸುವ ಪ್ರಯತ್ನವೇ ಸ್ಟೈಲ್‌ ಗ್ಯಾಲರಿ ಆಗಿದ್ದು, ವಿವಿಧ ವಿನ್ಯಾಸಗಾರರ ಹೆಮ್ಮೆ ಮತ್ತು ಅಸಲಿತನವನ್ನು ಇದು ಪ್ರದರ್ಶಿಸಿತು. ಭಾರತದಲ್ಲಿನ ಹೊಸ ಫ್ಯಾಷನ್ ಅನ್ನು ಮರುರೂಪಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ.”

ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್‌ ಟೂರ್ 2022 ರ ಕ್ಯುರೇಟರ್ ಇನ್ ಚೀಫ್‌ ಆಗಿರುವ ಜನಪ್ರಿಯ ಡಿಸೈನರ್ ಆಶಿಶ್ ಸೋನಿ ಹೇಳುವಂತೆ “ತನ್ನ 16ನೇ ಆವೃತ್ತಿಗೆ ಬ್ಲೆಂಡರ್ಸ್‌ ಪ್ರೈಡ್ ಗ್ಲಾಸ್‌ವೇರ್‌ ಫ್ಯಾಷನ್ ಟೂರ್‌ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಾವು ಹೊಸ ಅಂಶಗಳನ್ನು ಸೇರಿಸುತ್ತಿದ್ದೇವೆ ಮತ್ತು ಡಿಸೈನರ್ ಮತ್ತು ಆರ್ಟಿಸ್ಟ್‌ ಸಹಭಾಗಿತ್ವ, ವಿಶಿಷ್ಟವಾದ ಸ್ಟೈಲ್ ಗ್ಯಾಲರಿ ಮತ್ತು ಫ್ಯಾಷನ್ ಟೂರ್ ಪಾರ್ಕ್‌ ಮೆಟಾವರ್ಸ್‌ ಅನ್ನೂ ಪರಿಚಯಿಸಿದ್ದೇವೆ. ಹಿಂದೆಂದೂ ಕಾಣದ ಫ್ಯಾಷನ್ ಅನುಭವಕ್ಕೆ ನಾವು ಜೀವ ತುಂಬಿದ್ದೇವೆ” ಎಂದಿದ್ದಾರೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ