ಮಗ ಸಾವನ್ನಪ್ಪಿರುವುದು ತಿಳಿಯದೇ 4 ದಿನ ಮೃತದೇಹದೊಂದಿಗೆ ಕಳೆದ ಅಂಧ ದಂಪತಿ
ಹೈದರಾಬಾದ್: ಮಗ ಸಾವನ್ನಪ್ಪಿರುವುದು ತಿಳಿಯದೇ ವೃದ್ಧ ಅಂಧ ದಂಪತಿ ನಾಲ್ಕು ದಿನಗಳ ಕಾಲ ಮಗನ ಮೃತದೇಹದೊಂದಿಗೆ ಕಾಲ ಕಳೆದ ಹೃದಯ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಪ್ರತಿ ದಿನ ಮಗ ತನ್ನ ತಾಯಿ ತಂದೆಗೆ ಆಹಾರ ನೀಡಿ ಸಲಹುತ್ತಿದ್ದ. ಪ್ರತಿ ದಿನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ರಾತ್ರಿ ಮಲಗಿದ್ದ ಮಗ ಮಲಗಿದ್ದಲ್ಲೇ ಸಾವನ್ನಪ್ಪಿದ್ದ. ಅಂಧ ತಂದೆ—ತಾಯಿಗೆ ಮಗ ಮೃತಪಟ್ಟಿರುವ ವಿಚಾರ ತಿಳಿದಿರಲಿಲ್ಲ.
ಮಗನನ್ನು ಕೂಗಿದರೂ ಮಗ ಅಂದು ಬರಲಿಲ್ಲ. ಆತ ಕೆಲಸಕ್ಕೆ ಹೋಗಿರಬಹುದು ಎಂದು ಮೊದಲನೇ ದಿನ ತಿಳಿದುಕೊಂಡಿದ್ದರು. ಹಸಿವಾದಾಗ ಮಗನನ್ನು ಹುಡುಕಾಡಿದ್ದಾರೆ.
ಆದರೆ ಮಗನ ಸುಳಿವು ಇರಲಿಲ್ಲ. ತೀವ್ರ ಹಸಿವಿನಿಂದ ತಂದೆ—ತಾಯಿ ಮಗನನ್ನು ಹುಡುಕಾಡಿದ್ದಾರೆ. ಮಗ ಮಲಗಿರುವ ಜಾಗಕ್ಕೆ ಬಂದಾಗ ಮಗನ ದೇಹ ಸಿಕ್ಕಿದೆ. ಆದರೆ ಮಗ ಮಾತನಾಡಲಿಲ್ಲ. ಅಷ್ಟರಲ್ಲಿ, ತಂದೆ ತಾಯಿ ನಿಶ್ಶಕ್ತಿಯಿಂದ ಮಗನ ಮೃತದೇಹದ ಬಳಿಯೇ ಕುಸಿದುಬಿದ್ದಿದ್ದಾರೆ.
ಘಟನೆ ನಡೆದು ನಾಲ್ಕು ದಿನದ ಬಳಿಕ ಸ್ಥಳೀಯರಿಗೆ ಮೃತದೇಹ ವಾಸನೆ ಬರಲು ಆರಂಭಿಸಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರೇ ಘಟನೆಯ ದೃಶ್ಯ ಕಂಡು ಮರುಗಿದ್ದಾರೆ.
ಈ ದಂಪತಿಗೆ ಕಿರಿಯ ಮಗ ಕೂಡ ಇದ್ದಾನೆ. ಆತ ಕೂಲಿ ಕೆಲಸಕ್ಕೆಂದು ಹೈದರಬಾದ್ ನಿಂದ ದೂರದಲ್ಲಿ ನೆಲೆಸಿದ್ದ. ಕೆಲದಿನಗಳಿಂದ ಆತ ಮನೆಗೆ ಬಂದಿರಲಿಲ್ಲ. ಹೀಗಾಗಿ ಘಟನೆ ಬೆಳಕಿಗೆ ಬಂದಿರಲಿಲ್ಲ. ಕಿರಿಯ ಮಗ ಕೊನೆಗೂ ತನ್ನ ಸಹೋದರ ಅಂತ್ಯಸಂಸ್ಕಾರವನ್ನು ನೆರೆವೇರಿಸಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: