ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೆಂಪು ಅಲ್ವಂತೆ: ಮಾಳವಿಕಾ ಅವಿನಾಶ್ ಹೇಳಿದ್ದೇನು?

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ, ಕೇಸರಿ ಬಣ್ಣದ ರಕ್ತ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣವನ್ನು ವರ್ಣಿಸಿದರು.
ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ, ಎಷ್ಟು ಅಂತರದಲ್ಲಿ ಗೆಲ್ಲಿಸುತ್ತೇವೆ ಎಂಬ ಸವಾಲು ನಮ್ಮ ಮುಂದಿದೆ ಎಂದರು.
26 ನೇ ತಾರೀಖು ಹೆಚ್ಚಿನ ಮದುವೆ ಮುಹೂರ್ತ ಇದೆಯಂತೆ, ಮದುವೆಗೆ ಹೋಗ್ತಿನಿ ಎಂದು ನರೇಂದ್ರ ಮೋದಿಗೆ ಅನ್ಯಾಯ ಮಾಡಿ ಹೋಗಿ ಬಿಟ್ಟಿರಾ?, ಅದಕ್ಕೂ ಮುಂಚೆ ಬಟನ್ ಒತ್ತಿ ಎಲ್ಲಿಗಾದರೂ ಹೋಗೋಕೆ ಹೇಳಿ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲದರ ಮೇಲೂ ತಮ್ಮ ಬೋರ್ಡ್ನ್ನು ಹಾಕಿಕೊಳ್ಳುತ್ತದೆ. ಹೀಗಾಗಿ ಜನರಿಗೆ ನಾವು ಮನವರಿಕೆ ಮಾಡಿಕೊಡಬೇಕು. ಸತತ ನಾಲ್ಕು ವರ್ಷಗಳ ಕಾಲ ಉಚಿತ ಆಹಾರವನ್ನ ಕೊಟ್ಟ ದೇಶ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ದೇಶದ 80 ಕೋಟಿ ಜನರಿಗೆ 2020 ರಿಂದ ಇಲ್ಲಿಯವರೆಗೂ ನಡೆಯುತ್ತಿದೆ. ಅನ್ನಸಂತರ್ಪಣೆ, ಧಾನ್ಯ ಸಂತರ್ಪಣೆ ಮೂಲಕ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth